ರಾಜಕೀಯವೈರಲ್ ನ್ಯೂಸ್

“ನನ್ನ ಭೇಟಿಗೆ ಬರುವವರು ಆಧಾರ್ ಕಾರ್ಡ್ ತನ್ನಿ” ಎಂದ ನಟಿ ಕಂಗನಾ ರಣಾವತ್..! ಬಿಜೆಪಿ ಸಂಸದೆ ಹೀಗೆ ಹೇಳಿದ್ದೇಕೆ..? ಏನಿದು ವಿವಾದ..?

ನ್ಯೂಸ್ ನಾಟೌಟ್: ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ತಮ್ಮ ಭೇಟಿಗೆ ಬರುವ ಜನ ಆಧಾರ್ ಕಾರ್ಡ್ ತರುವಂತೆ ಹೇಳಿರುವ ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಾಣಾವತ್ ವಿವಾದ ಸೃಷ್ಟಿಸಿದ್ದಾರೆ.

ತಮ್ಮ ಭೇಟಿಗೆ ಕಾದು ನಿಂತಿದ್ದ ಜನರಿಗೆ ಭೇಟಿಯ ಬದಲು ಬಂದ ಕಾರಣವನ್ನು ಲಿಖಿತವಾಗಿ ನೀಡುವಂತೆಯೂ ನಟಿ ತಿಳಿಸಿದ್ದಾರೆ. ದೊಡ್ಡ ಸಂಖ್ಯೆಯ ಪ್ರವಾಸಿಗಳು ಮತ್ತು ಹೊರಗಿನವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮವನ್ನು ಜಾರಿಗೊಳಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಮಂಡಿಯಲ್ಲಿ ಇರುವಾಗಲೆಲ್ಲ ನಿಯೋಜಿತ ಸಂವಾದ ಕೇಂದ್ರಗಳಲ್ಲಿ ಸಂದರ್ಶಕರನ್ನು ಭೇಟಿ ಮಾಡಲು ಲಭ್ಯವಿರುವುದಾಗಿ ತಿಳಿಸಿದ್ದಾರೆ.

“ಹಿಮಾಚಲ ಪ್ರದೇಶದ ದೊಡ್ಡ ಸಂಖ್ಯೆಯ ಪ್ರವಾಸಿಗಳನ್ನು ಆಕರ್ಷಿಸುತ್ತಿದೆ. ಆದ್ದರಿಂದ ಮಂಡಿ ಪ್ರದೇಶದ ಒಂದು ಆಧಾರ್ ಕಾರ್ಡ್ ತರುವುದು ಅಗತ್ಯ. ಕ್ಷೇತ್ರದಲ್ಲಿ ನಿಮ್ಮ ಕೆಲಸದ ಸಂಬಂಧದ ವಿವರವನ್ನು ಒಂದು ಪತ್ರದಲ್ಲಿ ಲಿಖಿತವಾಗಿ ನೀಡಬೇಕು. ಆದ್ದರಿಂದ ಯಾವುದೇ ಅನಾನುಕೂಲವಾಗದಂತೆ ಎಚ್ಚರ ವಹಿಸಬೇಕು” ಎಂದು ತಿಳಿದ್ದಾರೆ.

Click 👇

https://newsnotout.com/2024/07/boy-touches-ibx-wire-kannada-news-19-year-old-nomore
https://newsnotout.com/2024/07/babbu-swami-daiva-kannada-news-theft-kannada-news-tulunadu
https://newsnotout.com/2024/07/elephant-no-more-viral-video-due-to-rail-collision-kannda-news-assam
https://newsnotout.com/2024/07/forest-department-kannada-news-elephant-issue-in-deserve-forest-area
https://newsnotout.com/2024/07/kmf-kananda-news-election-for-congress-and-bjp-kannada-news

Related posts

ಸೌಜನ್ಯ ಪ್ರಕರಣ: ಮರು ತನಿಖೆಗೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್..! ಸೌಜನ್ಯ ಪೋಷಕರಿಗೆ ಭಾರೀ ಹಿನ್ನಡೆ..!

ಮಂಗಳೂರು: ಮೋದಿ ರೋಡ್ ಶೋ ಬಳಿಕ ಯುವಕನಿಗೆ ಏಟು..! ಅಷ್ಟಕ್ಕೂ ಅಲ್ಲೇನಾಯ್ತು..?

ಈಕೆಗೆ 12 ದಿನಗಳೊಳಗೆ ಬರೋಬ್ಬರಿ ಮೂರು ಬಾರಿ ವಿಷದ ಹಾವು ಕಚ್ಚಿತು..! ಮುಂದೇನಾಯ್ತು?