ಕರಾವಳಿ

ಮಂಗಳೂರು: ಜೈನ ಮುನಿ ಶ್ರೀ ಕಾಮ ಕುಮಾರ ಹತ್ಯೆ ಖಂಡಿಸಿ ಪ್ರತಿಭಟನೆ, ಡಿಸಿಗೆ ಮನವಿ ಸಲ್ಲಿಸಿದ ಭಾರತೀಯ ಜೈನ್ ಮಿಲನ್, ಜೈನ್ ಸಮಾಜ

ನ್ಯೂಸ್ ನಾಟೌಟ್ : ಜೈನ ಮುನಿ ಶ್ರೀ ಕಾಮ ಕುಮಾರ ನಂದಿ ಮಹಾರಾಜ ಸ್ವಾಮಿ ಗಳ ಹತ್ಯೆಗೆ ಎಲ್ಲೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರಾಜ್ಯದ ವಿವಿಧ ಕಡೆ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲೂ ಸ್ವಾಮೀಜಿ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಭಾರತೀಯ ಜೈನ್ ಮಿಲನ್, ಜೈನ್ ಸಮಾಜದಿಂದ ಶಾಂತಿಯುತ ಪ್ರತಿಭಟನಾ ಮೆರವಣಿಗೆ ಸೋಮವಾರ ನಡೆಯಿತು. ಕ್ಲಾಕ್ ಟವರ್ ನಿಂದ ಡಿಸಿ ಕಚೇರಿಯಿಂದ ಮೆರವಣಿಗೆ ಮೂಲಕ ಹೋಗಿ ಡಿಸಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಮೂಡಬಿದಿರೆ ಜೈನ ಮಠದ ಸ್ವಸ್ತಿಕ ಶ್ರೀ ಡಾ‌‌. ಚಾರುಕೀರ್ತಿ ಭಟ್ಟಾಚಾರ್ಯ ಸ್ವಾಮಿ ಭಾಗಿಯಾಗಿದ್ದರು. ರಾಜ್ಯದಲ್ಲಿ ನಡೆದ ಈ ಘಟನೆ ಖಂಡನಾರ್ಹವಾಗಿದೆ‌. ಇಲ್ಲಿ ಸ್ವಾಮಿಜಿಗಳಿಗೆ ರಕ್ಷಣೆಯ ಅಗತ್ಯವಿದೆ.

ಎಲ್ಲಾ ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿನ ಸ್ವಾಮಿಗಳಿಗೆ ರಕ್ಷಣೆ ಅಗತ್ಯವಿದೆ, ಮಾತ್ರವಲ್ಲದೆ ಎಲ್ಲಾ ಮಠದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಸರ್ಕಾರ ಮುಂದಾಗಬೇಕು, ಈ ಬಗ್ಗೆ ಗೃಹ ಸಚಿವರು, ಸಿಎಂ ಹೆಚ್ಚು ಗಮನ ಹರಿಸಬೇಕಿದೆ ಎಂದು ತಿಳಿಸಿದರು.

Related posts

ದಕ್ಷಿಣ ಕನ್ನಡದಲ್ಲಿ ಡೆಂಗ್ಯೂಗೆ ವ್ಯಕ್ತಿ ಬಲಿ..! ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದೇನು..?

ಬೆಟ್ಟಂಪಾಡಿ: ಕಾಡುಕೋಣ ತಿವಿದು ವ್ಯಕ್ತಿಗೆ ಗಂಭೀರ ಗಾಯ,ಆಸ್ಪತ್ರೆಯಲ್ಲಿ ಚಿಕಿತ್ಸೆ

ಗ್ರಾಹಕರ ಸೋಗಿನಲ್ಲಿ ಬಂದು ಬಟ್ಟೆ ಕಳವುಗೈದ ಚಾಲಾಕಿ ಕಳ್ಳಿ !,ದೃಶ್ಯ ಸಿಸಿಟಿವಿಯಲ್ಲಿ ಸೆರೆ