ಕ್ರೈಂ

ಕಲ್ಲುಗುಂಡಿ ಹಿಟ್ ಅಂಡ್ ರನ್ ಕೇಸ್‌: ಮೈಸೂರಲ್ಲಿ ಸಿಕ್ಕಿಬಿದ್ದ ಇಂಜಿನಿಯರ್ ವಿದ್ಯಾರ್ಥಿಗಳು

ಮೈಸೂರು: ಕಲ್ಲುಗುಂಡಿಯಲ್ಲಿ ತೇಜಸ್ ಬಂಟೋಡಿ ಎಂಬ ಯುವಕನ ಬೈಕ್ ಗೆ ಗುದ್ದಿ ಪರಾರಿಯಾಗಿದ್ದ ಕಾರು ಮೈಸೂರಿನಲ್ಲಿ ಪತ್ತೆಯಾಗಿದೆ. ಗುದ್ದಿದ ಕಾರಿನಲ್ಲಿದ್ದವರು ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಇಂಜಿನೀಯರಿಂಗ್ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ಭಾನುವಾರ ಬೆಳಗ್ಗೆ ತೇಜಸ್ ಬಂಟೋಡಿ ಅವರ ಬೈಕ್ ಗೆ ಗುದ್ದಿದ್ದ ಕಾರು ಮಡಿಕೇರಿ ಕಡೆಗೆ ಪರಾರಿಯಾಗಿತ್ತು. ಇವರನ್ನು ಹಿಡಿಯಲು ಕಲ್ಲುಗುಂಡಿಯಲ್ಲಿದ್ದ ಸಿಸಿ ಕ್ಯಾಮರಾ ಪ್ರಮುಖ ಪಾತ್ರವಹಿಸಿತ್ತು. ಅಂತೆಯೇ ಕಾರಿನಲ್ಲಿದ್ದವರು ನಿನ್ನೆ ಸುಳ್ಯ ಠಾಣೆಗೆ ಹಾಜರಾಗಿದ್ದರು. ಈ ವೇಳೆ ಹೆದರಿ ಓಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕೊನೆಗೆ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲು ತೀರ್ಮಾನಿಸಲಾಯಿತು. ಘಟನೆಯಲ್ಲಿ ತೇಜಸ್ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಬೈಕ್ ಜಖಂಗೊಂಡಿತ್ತು. ಹೀಗಾಗಿ 14 ಸಾವಿರ ರೂ.ಗೆ ಸೆಟ್ಲ್ ಮೆಂಟ್ ಮಾಡಲಾಯಿತು ಎಂದು ತಿಳಿದು ಬಂದಿದೆ.

Related posts

‘ದುರುದ್ದೇಶಪೂರ್ವಕವಾಗಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿದರೆ ಪ್ರತಿಭಟನೆ ಮಾಡಬೇಕಾದೀತು!’ ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬಗ್ಗೆ ಆರಗ ಜ್ಞಾನೇಂದ್ರ ಹೇಳಿಕೆ

ಅಂಬಟೆಡ್ಕ: ಗಾಂಜಾ ಕಳ್ಳರ ಹೆಡೆಮುರಿ ಕಟ್ಟಿದ ಅಬಕಾರಿ ಅಧಿಕಾರಿಗಳು

‘ಮನೆಯಲ್ಲೇ ಕುಳಿತು ಕೆಲಸ ಮಾಡಿ’ ಎಂಬ ಮೆಸೇಜ್ ನಿಮಗೂ ಬಂದಿದೆಯಾ..? ಈ ಬಗ್ಗೆ ಕೇಂದ್ರ ಸಚಿವಾಲಯ ನೀಡಿದ ಎಚ್ಚರಿಕೆಗಳೇನು?