ಕರಾವಳಿರಾಜಕೀಯ

ಪುತ್ತೂರು: ಕಂಬಳದ ಕೋಣಕ್ಕೆ ಹೊಡೆದರೂ ಶಿಕ್ಷೆಯಾಗುವ ಕಾಲವಿದು, ಹಿಂದೂ ಕಾರ್ಯಕರ್ತರಿಗೆ ಹೊಡೆಸಿದ್ದು ಕಾಂಗ್ರೆಸ್ ಎಂದ ಕಲ್ಲಡ್ಕ ಪ್ರಭಾಕರ್ ಭಟ್

ನ್ಯೂಸ್ ನಾಟೌಟ್ :  ಕಾಂಗ್ರೆಸ್ ಸರ್ಕಾರ ಮುಂದಿನ 5 ವರ್ಷ ಹಿಂದೂಗಳ ಮೇಲೆ ಏನು ಮಾಡುತ್ತೆ ಅನ್ನೋದರ ಸ್ಯಾಂಪಲ್ ಇದು, ಕಂಬಳದ ಕೋಣಕ್ಕೆ ಹೊಡೆದರೂ ಶಿಕ್ಷೆಯಾಗುವ ಕಾಲವಿದು. ಆದರೆ, ಹಿಂದೂ ಕಾರ್ಯಕರ್ತರ ಮೇಲೆ ಪ್ರಾಣಿಗಳಿಗಿಂತಲೂ ಕ್ರೂರವಾಗಿ ಹೊಡೆದಿದ್ದಾರೆ ಇದು ಖಂಡನೀಯ ಎಂದು ಆರ್‌ ಎಸ್‌ ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಬಿಜೆಪಿ ನಾಯಕರ ಬ್ಯಾನರ್ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಹಲ್ಲೆಗೊಳಗಾದ ಹಿಂದೂ‌ ಕಾರ್ಯಕರ್ತರನ್ನು ಆರ್‌ಎಸ್‌ಎಸ್ ಮುಖಂಡ‌ ಕಲ್ಲಡ್ಕ ಪ್ರಭಾಕರ ಭಟ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ಸರಕಾರ ಮುಂದಿನ 5 ವರ್ಷ ಹಿಂದೂಗಳ ಮೇಲೆ ಏನು ಮಾಡುತ್ತೆ ಅನ್ನೋದರ ಸ್ಯಾಂಪಲ್ ಇದು ಎಂದಿದ್ದಾರೆ.

ಕಂಬಳದ ಕೋಣಕ್ಕೆ ಹೊಡೆದರೂ ಶಿಕ್ಷೆಯಾಗುವ ಕಾಲವಿದು. ಆದರೆ, ಹಿಂದೂ ಕಾರ್ಯಕರ್ತರ ಮೇಲೆ ಪ್ರಾಣಿಗಳಿಗಿಂತಲೂ ಕ್ರೂರವಾಗಿ ಹೊಡೆದಿದ್ದಾರೆ. ಪೊಲೀಸರು ಹಿಂದೂ ಕಾರ್ಯಕರ್ತರನ್ನು ಪ್ರಾಣಿಗಿಂತಲೂ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಈ ವಿಚಾರವಾಗಿ ಇಬ್ಬರು ಪೋಲೀಸರನ್ನು ಅಮಾನತು ಮಾಡಿದ್ದಾರೆ, ಈ ಘಟನೆಗೆ ಮೂಲ ಕಾರಣವಾದ ಡಿವೈಎಸ್ಪಿಯನ್ನು ಅಮಾನತು ಮಾಡಬೇಕು. ಪೋಲೀಸರು ನಮಗೆ ಒತ್ತಡ ಇತ್ತು ಎನ್ನುತ್ತಾರೆ ಯಾರ ಒತ್ತಡ ಇದೆ ಅನ್ನೋದನ್ನ ಹೇಳಲಿ, ಬೇರೆ ಯಾರು ಒತ್ತಡ ಮಾಡಬೇಕು ಎಂದು ಕಿಡಿಕಾರಿದ್ದಾರೆ.

ಇನ್ನೂ ಬಿಜೆಪಿಯವರು ಪೊಲೀಸರ ಮೇಲೆ ಒತ್ತಡ ಹಾಕ್ಲಿಕ್ಕೆ ಆಗುತ್ತಾ? ಸಣ್ಣಪುಟ್ಟ ವ್ಯತ್ಯಾಸ ಆಗಿದೆ, ಆದರೆ ಇದಕ್ಕೆ ಇಷ್ಟು ದೊಡ್ಡ ಶಿಕ್ಷೆಯ ಅಗತ್ಯವಿಲ್ಲ. ಸರಕಾರ ಹೇಳುತ್ತೆ ಎಂದು ಪೊಲೀಸರು ಹೀಗೆ ಮಾಡಿದರೆ ಮುಂದೆ ಕೆಟ್ಟ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Related posts

ಕಡಲ್ಗಳ್ಳರಿಂದ ಪಾಕ್​ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆ..! ‘ಇಂಡಿಯಾ ಜಿಂದಾಬಾದ್’ ಘೋಷಣೆ ಕೂಗಿದ ಪಾಕ್ ನಾವಿಕರು

ಮಡಿಕೇರಿ: ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಫ್ಯಾನ್‌ಗೆ ನೇಣು ಬಿಗಿದು ಕೊನೆಯುಸಿರೆಳೆದ..!ಬಸ್‌ ಕಂಡಕ್ಟರ್‌ವೊಬ್ಬನ ಈ ನಿರ್ಧಾರಕ್ಕೆ ಕಾರಣವೇನು ?

ಟಿಟಿ ಹಾಗೂ ಟಿಪ್ಪರ್ ನಡುವೆ ಅಪಘಾತ,ಚಾಲಕನಿಗೆ ಗಾಯ