ಕೊಡಗು

ಜಲಸ್ಫೋಟ, ಬರೆ ಕುಸಿತ, ಅಡಿಕೆ ತೋಟ ಜಲಸಮಾಧಿ

ನ್ಯೂಸ್ ನಾಟೌಟ್: ನಿನ್ನೆ (ಆ.೨ಕ್ಕೆ) ರಾತ್ರಿ ಸುರಿದ ಮಳೆಯ ಅಬ್ಬರಕ್ಕೆ ಕೊಯನಾಡಿನ ಕಲ್ಲಾಳ ಕತೋಜಿಯಲ್ಲಿ ಭಾರಿ ಬರೆಯೊಂದು ಕುಸಿದಿದೆ.

ಬರೆ ಕುಸಿತಕ್ಕೆಒಂದೇ ಸಮನೆ ನೀರು ತನ್ನ ದಿಕ್ಕನ್ನೇ ಬದಲಿಸಿ ಹರಿಯುತ್ತಿದೆ. ಹರಿವ ರಭಸಕ್ಕೆ ಕೃಷಿಕರೊಬ್ಬರ ಅಡಿಕೆ ತೋಟಗಳೇ ಜಲ ಸಮಾಧಿ ಯಾಗಿದೆ. ಅವರಿಗೆ ಸಾವಿರಾರು ರೂ. ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಇನ್ನು ಕೊಡಗಿನ ಕಲ್ಲಾಳ ರಸ್ತೆಯಲ್ಲಿ ಮತ್ತೆ ಮಣ್ಣು ಕುಸಿದು ಬಿದ್ದಿದೆ. ಇದರಿಂದ ರಸ್ತೆ ಸಂಚಾರ ಬಂದ್ ಆಗಿದೆ. ಮಂಗಳವಾರವೂ ಇಲ್ಲಿ ಮಣ್ಣು ಕುಸಿದಿತ್ತು. ಇದನ್ನು ತೆರವುಗೊಳಿಸಲಾಗಿತ್ತು. ಇದೀಗ ಮತ್ತೆ ಕುಸಿತಕ್ಕೆ ಒಳಗಾಗಿರುವುದು ಆತಂಕಕ್ಕೆ ಕಾರಣವಾಗಿದೆ.

Related posts

ಕೊಡಗಿನಲ್ಲಿ ಕಾಡಾನೆ ದಾಳಿ, ಜೀವ ಬಲಿ

ಪೆರಾಜೆ: ಕೋಳಿ ಅಂಕದ ಮೇಲೆ ಪೊಲೀಸರ ದಿಢೀರ್ ದಾಳಿ..! ಕೋಳಿ ಹಿಡಿದುಕೊಂಡೇ ಓಡಿದ ಜನ್ರು..!

ಕೊಡಗು ಸಂಪಾಜೆ: ದೇವರಕೊಲ್ಲಿ ಸಮೀಪ ಟೀ ಅಂಗಡಿಗೆ ನುಗ್ಗಿದ ಕಾರು..!, ಅಂಗಡಿ, ಮೂರು ಬೈಕ್‌ಗಳು ಜಖಂ