ಕ್ರೈಂ

ಕಡಬ: ಅಪ್ರಾಪ್ತ ಬಾಲಕಿಯ ಪ್ಯಾಂಟ್ ಜಾರಿಸಿ ರೇಪ್ ಗೆ ಯತ್ನ, ಪೋಕ್ಸೋ ಪ್ರಕರಣ ದಾಖಲು

ಕಡಬ: ಅಪ್ರಾಪ್ತ  ಬಾಲಕಿಯೊಂದಿಗೆ   ಅಸಭ್ಯವಾಗಿ ವರ್ತಿಸಿದ  ವ್ಯಕ್ತಿ  ಹಾಗೂ ಆತನ ಪತ್ನಿಯ ವಿರುದ್ದ ಕಡಬ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಯುವತಿಯು ತೋಟದಲ್ಲಿ ನೀರು ಹಾಯಿಸುವ ಸಲುವಾಗಿ ಸ್ಪಿಂಕ್ಲರ್ ಸೆಟ್ ಮಾಡುತ್ತಿದ್ದ ವೇಳೆ  ಜಾನ್ ಎಂಬಾತ ಬಂದು  ತಲೆಗೆ ಕೈಯಿಂದ ಹೊಡೆದು  ನಾನು ರೇಪ್ ಮಾಡುತ್ತೇನೆಂದು ನೀನು ಪ್ರಚಾರ ಪಡಿಸಿದ್ದು, ಈಗ ರೇಪ್ ಮಾಡಿ ತೋರಿಸುತ್ತೇನೆ ಎಂದು ಹೇಳಿ ಪ್ಯಾಂಟ್ ಜಾರಿಸಲು ಯತ್ನಿಸಿರುವುದಾಗಿ  ದೂರಿನಲ್ಲಿ ಆರೋಪಿಸಲಾಗಿದೆ. ಸುದ್ದಿ ತಿಳಿದು  ತೋಟಕ್ಕೆ ಬಂದಿದ್ದ   ಬಾಲಕಿಯ ಅಜ್ಜಿ ಮರಿಯಮ್ಮ ಎಂಬವರಿಗೂ ಹಲ್ಲೆ ಮಾಡಿದಲ್ಲದೆ,   ಆರೋಪಿಯ ಪತ್ನಿಯೂ ಯುವತಿಗೆ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.ಯುವತಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು  ದೂರಿನ ಆಧಾರದಲ್ಲಿ ಕಡಬ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Student Hanging: ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ..! ಆತ್ಮಹತ್ಯೆಯಲ್ಲ ಕೊಲೆ ಎಂದ ಹಾಸ್ಟೆಲ್ ವಿದ್ಯಾರ್ಥಿನಿಯರು..!

ಬಸ್‌ ಸೀಟ್ ವಿಚಾರಕ್ಕೆ ವೃದ್ಧನಿಗೆ ಹೊಡೆದ ಮಹಿಳೆಯರು..! ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆದ ಪೊಲೀಸರು ಮಾಡಿದ್ದೇನು?

ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ..! ಮೃತಪಟ್ಟ 91 ಮಂದಿಯಲ್ಲಿ 14 ಮಂದಿ ಪೊಲೀಸರು..!