ಕಡಬ: ಎಸ್.ಐ. ರುಕ್ಮ ನಾಯ್ಕ್ ಪ್ರಯಾಣಿಸುತ್ತಿದ್ದ ಜೀಪು ಹಾಗೂ ಖಾಸಗಿ ಬೊಲೆರೋ ಮಧ್ಯೆ ಡಿಕ್ಕಿ ಸಂಭವಿಸಿದ್ದು ಎರಡು ವಾಹನಗಳು ನುಜ್ಜುಗುಜ್ಜಾದ ಘಟನೆ ಸೆ.4ರಂದು ಬೆಳಿಗ್ಗೆ ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ. ಪೊಲೀಸ್ ಜೀಪು ಹಾಗೂ ಬೊಲೇರೋ ಕಾರಿನ ಚಾಲಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಓವರ್ ಟೇಕ್ ಭರದಲ್ಲಿ ಮುಖಾಮುಖಿ ಸಂಭವಿಸಿದೆ. ಭಾರಿ ಅನಾಹುತ ತಪ್ಪಿದೆ ಎಂದು ವರದಿಯಾಗಿದೆ.