ನ್ಯೂಸ್ ನಾಟೌಟ್: ರಕ್ಷಿತಾರಣ್ಯವೊಂದರಲ್ಲಿ ಕೊಳೆತು ಹೋದ ಮಾನವನ ಅಸ್ತಿ ಪಂಜರ ಪತ್ತೆಯಾಗಿದೆ.
ಗುರುತು ಪತ್ತೆ ಹಚ್ಚುವುದಕ್ಕಾಗಿ ಸಹಕರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಂದ ಹಾಗೆ ಈ ಘಟನೆ ನಡೆದಿರುವುದು ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಬಾರು ಗ್ರಾಮದ ಬೊಟ್ಟಡ್ಕ ಬಳಿಯ ಕೊಂಬಾರು ರಕ್ಷಿಯಾರಣ್ಯದ ಉಡೆಂಜಿಪಲ್ಲ ತೋಡು ಪ್ರದೇಶದಲ್ಲಿ. ತಲೆ ಬುರುಡೆ, ಎದೆ ಮೂಳೆಗಳು , ಕಾಲಿನ ಮೂಳೆಗಳು ಮಾತ್ರ ಕಂಡು ಬಂದಿದೆ. ಮೃತ ದೇಹ ಪುರುಷನದ್ದೋ ಮಹಿಳೆಯದ್ದೋ ಅನ್ನುವುದು ಇನ್ನೂ ಗೊತ್ತಾಗಿಲ್ಲ. ಸುಮಾರು ನಾಲ್ಕರಿಂದ ಆರು ತಿಂಗಳ ಹಿಂದೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ.