ಕರಾವಳಿದೇಶ-ಪ್ರಪಂಚದೇಶ-ವಿದೇಶರಾಜಕೀಯ

ಕಡಬ: ಮದುವೆಗೆ ಉಡುಗೊರೆ ತರಬೇಡಿ ಮೋದಿಗೆ ಮತ ನೀಡಿ, ವೈರಲ್ ಆಗುತ್ತಿದೆ ಕರಾವಳಿಯ ಮದುವೆ ಆಮಂತ್ರಣ, ನಾಳೆ(ಎ.18) ಮದುವೆ

ನ್ಯೂಸ್ ನಾಟೌಟ್: ಮೋದಿಯ ಮೇಲಿನ ಅಭಿಮಾನಕ್ಕೆ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಉಡುಗೊರೆಯ ಬದಲು ಮೋದಿಗೆ ಮತ ಕೇಳಿರುವ ಘಟನೆ ಕಡಬ ತಾಲೂಕಿನ ಆಲಂತಾಯ ಗ್ರಾಮದಲ್ಲಿ ನಡೆದಿದೆ. ಡಿ| ಶಿನಪ್ಪ ಗೌಡ ಎಂಬವರ ಮಗ ಶಿವಪ್ರಸಾದ್ ಎಂಬರು “ಈ ಬಾರಿಯೂ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದೇ ವಧು ವರರಿಗೆ ನೀಡುವ ಉಡುಗೊರೆ, ಯಾಕೆಂದರೆ ನಮ್ಮ ಭವಿಷ್ಯದ ಭಾರತ ಸುಭದ್ರವಾಗಿರಬೇಕು” ಎಂದು ವರನ ಕಡೆಯ ಮದುವೆ ಆಮಂತ್ರನ ಪತ್ರಿಕೆಯಲ್ಲಿ ಬರೆಸಲಾಗಿದೆ.

ಈ ಮದುವೆ ನಾಳೆ(ಎ.18) ರಂದು ಗೋಳಿತೊಟ್ಟು ಸಿದ್ದಿ ವಿನಾಯಕ ಕಲಾ ಮಮದಿರದಲ್ಲಿ ನಡೆಯಲಿದ್ದು ಈಗ ಈ ಆಮಂತ್ರನ ಪತ್ರಿಕೆ ಎಲ್ಲೆಡೆ ವೈರಲ್ ಆಗುತ್ತಿದೆ.

ತೆಲಂಗಾಣದ ಸಂಗಾರೆಡ್ಡಿಯ ವ್ಯಕ್ತಿಯೊಬ್ಬರು ತಮ್ಮ ಮಗನ ಮದುವೆಗೆ ಅತಿಥಿಗಳನ್ನು ಆಹ್ವಾನಿಸುವಾಗ ವಿಶಿಷ್ಟವಾದ ವಿನಂತಿಯನ್ನು ಮಾಡಿದ್ದ ಇಂತಹದ್ದೇ ಘಟನೆ ಈ ಕೆಲ ದಿನಗಲ ಹಿಂದೆ ವರದಿಯಾಗಿತ್ತು. ಆಮಂತ್ರಣ ಪತ್ರಿಕೆಯಲ್ಲಿ ನವವಿವಾಹಿತರಿಗೆ ಉಡುಗೊರೆಗಳನ್ನು ಕೊಂಡೊಯ್ಯಬೇಡಿ, ಬದಲಿಗೆ ಮುಂಬರುವ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ನೀಡಿ ಎಂದು ಕೇಳುವ ಸಂದೇಶ ತೆಲಂಗಾನದ ಮದುವೆ ಕಾರ್ಡ್ ನಲ್ಲೂ ಮುದ್ರಿಸಲಾಗಿತ್ತು. ಸಾಯಿಕುಮಾರ್ ಮತ್ತು ಮಹಿಮಾ ರಾಣಿಯ ಮದುವೆ ಕಾರ್ಡ್‌ನ ಕವರ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ” ಈ ಮದುವೆಯೂ ಏಪ್ರಿಲ್ 4 ರಂದು ಮದುವೆ ನಡೆದಿದೆ. ಇತ್ತೀಚೆಗೆ ಈ ರೀತಿ ವಿಚಿತ್ರವಾಗಿ ಅಭಿಮಾನ ತೋರುವವರ ಸಂಖ್ಯೆ ಹೆಚ್ಚಾಗಿದ್ದು ಆಗಾಗ ವರದಿಯಾಗುತ್ತಿದೆ.

Related posts

ಭೂ ಕುಸಿತದಿಂದ ನಿಂತಿದ್ದ ಮಂಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭ, 12 ದಿನದ ಬಳಿಕ ಕಾರ್ಯಾರಂಭ

ಇಬ್ಬರು ಮುದ್ದಾದ ಮಕ್ಕಳನ್ನು ಬಿಟ್ಟು ಪರಪುರುಷನೊಂದಿಗೆ ಓಡಿಹೋದ ಪತ್ನಿ!ಕುದಿಯುತ್ತಿದ್ದ ಕೋಪದಿಂದ ಮಡದಿಯ ಶಿರಚ್ಛೇದ ಮಾಡಿದ ಪತಿರಾಯ

ಗಾಳಿಯಲ್ಲಿ ಗಿರಗಿರನೆ ತಿರುಗಿದ ವಿಂಡೀಸ್ ಕ್ರಿಕೆಟಿಗ, ವಿಕೆಟ್ ಸಿಕ್ಕ ಸಂಭ್ರಮವನ್ನು ವ್ಯಕ್ತಪಡಿಸಿದ ರೀತಿಗೆ ಬೆರಗಾದ ಕ್ರಿಕೆಟ್ ಪ್ರೇಮಿಗಳು, ಇಲ್ಲಿದೆ ವೈರಲ್ ವಿಡಿಯೋ