ಸುಳ್ಯ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ವರ್ಷಿತಾ ಪಿ.ಕೆ 85 ನೇ ಶ್ರೇಯಾಂಕ ಪಡೆದು ರಾಜ್ಯ ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ಧೆಗೆ ಆಯ್ಕೆಯಾಗಿದ್ದಾರೆ. ವರ್ಷಿತಾ ಕಡಬ ತಾಲೂಕಿನ ರೆಂಜಿಲಾಡಿ ನಿವಾಸಿ ಕುಮಾರ್ ಜನಾರ್ಧನ ಹಾಗೂ ಬಿಳಿನೆಲೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಪ್ರೇಮ ಕುಮಾರಿ ಅವರ ಪುತ್ರಿಯಾಗಿದ್ದಾರೆ. ಈಕೆ ಮೊರಾರ್ಜಿ ದೇಸಾಯಿ ಇಂಗ್ಲೀಷ್ ಮೀಡಿಯಂ, ಎಸ್.ಡಿ.ಎಂ.ಉಜಿರೆ, ಹಾಗೂ ಮಂಗಳೂರು ಪಿಷರಿಷಸ್ ವಿಜ್ಞಾನ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ.