ಕರಾವಳಿ

ಕಡಬ: ಆಲ್ಟೋ ಕಾರು ಮತ್ತು ಬೈಕ್ ನಡುವೆ ಡಿಕ್ಕಿ,ಬೈಕ್ ಸವಾರ ಗಂಭೀರ

ನ್ಯೂಸ್ ನಾಟೌಟ್ : ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.ಕಡಬ ಸಮೀಪದ ಬಲ್ಯ ಎಂಬಲ್ಲಿ ಈ ಘಟನೆ ನಡೆದಿದ್ದು,ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು,ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳೂರು ಕಡೆಯಿಂದ ಸುಬ್ರಹ್ಮಣ್ಯಕ್ಕೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ದಂಪತಿ ಪ್ರಯಾಣಿಸುತ್ತಿದ್ದ ಆಲ್ಟೊ ಕಾರು ಬಲ್ಯ ತಲುಪುತ್ತಿದ್ದಂತೆ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಸವಾರ ನೆಲ್ಯಾಡಿ ರಸ್ತೆಗೆ ತನ್ನ ಬೈಕನ್ನು ತಿರುಗಿಸುವ ವೇಳೆ ಡಿಕ್ಕಿ ಸಂಭವಿಸಿದೆ.ಕಾರು ಮತ್ತು ಬೈಕ್ ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Related posts

ಮಾಜಿ ಸಚಿವ ರಮಾನಾಥ ರೈ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಣೆ

ಕೈಮಗ್ಗ, ಜವುಳಿಗೆ ಒತ್ತು, ಇನ್ನೆಂಟು ತಿಂಗಳಲ್ಲಿ ಬೃಹತ್ ಉದ್ಯೋಗ ಸೃಷ್ಠಿಯ ಗುರಿ

ಮಹಿಳೆಯರೇ ಮುಟ್ಟಿನ ಕಪ್ ಬಗ್ಗೆ ತಿಳಿಯಿರಿ, ಏನಿದು ಮುಟ್ಟಿನ ಕಪ್..? ಕೆವಿಜಿ ವೈದ್ಯೆ ಗೀತಾ ದೊಪ್ಪ ಹೇಳಿದ್ದೇನು..?