ಕರಾವಳಿರಾಜಕೀಯ

ಯುಗಾದಿಗೆ ನಡೆಯಲಿದೆ ಹಲಾಲ್‌ ವಿರುದ್ಧ ಜಟ್ಕಾ ಅಭಿಯಾನ: ಪ್ರಮೋದ್ ಮುತಾಲಿಕ್

ನ್ಯೂಸ್‌ನಾಟೌಟ್‌ : ಮುಂಬರುವ ಯುಗಾದಿಗೆ ಕಳೆದ ವರ್ಷದ ರೀತಿಯಲ್ಲೇ ಹಲಾಲ್ ವಿರುದ್ಧ ಜಟ್ಕಾ ಕಟ್ ಅಭಿಯಾನ ನಡೆಯಲಿದೆ. ಹಲಾಲ್ ಕ್ರಮ ಇಸ್ಲಾಂಗೆ ಸೇರಿದ್ದು. ಮುಸ್ಲಿಮರು ಹಿಂದುಗಳು ಕಟ್ ಮಾಡಿದ ಮಾಂಸ ತಿನ್ನದಿರುವಾಗ ನಾವು ಯಾಕೆ ಅಲ್ಲಾನಿಗೆ ಬಲಿ ಕೊಟ್ಟ ಕುರಿಯ ಮಾಂಸವನ್ನು ತಿನ್ನಬೇಕು ಎಂದು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

ಜಮಾತೆ ಉಲೇಮಾ ಹಿಂದ್ ಎನ್ನುವ ಟ್ರಸ್ಟ್ ಹಲಾಲ್ ಹೆಸರಿನಲ್ಲಿ ಜಗತ್ತಿನಲ್ಲಿ ಎರಡು ಲಕ್ಷ ಕೋಟಿ ರೂ. ಸಂಪಾದನೆ ಮಾಡುತ್ತಿದೆ. ಈ ದುಡ್ಡು ಉಗ್ರರಿಗೆ ಸಂದಾಯವಾಗುತ್ತದೆ. ಮಂಡ್ಯದಲ್ಲಿ ಹಿಜಾಬ್ ಪರವಾಗಿ ಅಲ್ಲಾಹು ಅಕ್ಬರ್‌ ಕೂಗಿದ ವಿದ್ಯಾರ್ಥಿನಿಗೆ ಈ ಟ್ರಸ್ಟ್ ಐದು ಲಕ್ಷ ರೂಪಾಯಿ ನೀಡಿದೆ. ರಾಜ್ಯದಲ್ಲಿ ಹಲವೆಡೆ ನಡೆದ ಗಲಭೆಯ ಹಿಂದೆ ಹಲಾಲ್ ದುಡ್ಡು ಇದೆ. ಹಲಾಲ್‌ ಮಾಂಸ ಸೇವಿಸಿ ಹಿಂದೂಗಳ ವಿರುದ್ಧವೇ ಷಡ್ಯಂತ್ರ ಮಾಡಲು ನಾವೇ ಅವಕಾಶ ನೀಡಿದಂತಾಗುತ್ತದೆ. ಆದ್ದರಿಂದ ಯುಗಾದಿ ವೇಳೆಗೆ ಹಲಾಲ್ ನಿಷೇಧಿಸಿ, ಹಿಂದುಗಳ ಜಟ್ಕಾ ಕಟ್ ಮಾಂಸ ತಿನ್ನಬೇಕೆಂದು ಆಗ್ರಹಿಸುತ್ತೇನೆ ಎಂದರು.

ಇಂಧನ ಸಚಿವ ಸುನಿಲ್ ಕುಮಾರ್ ಟಿವಿ ಸಂದರ್ಶನದಲ್ಲಿ ರಾಮ ಮಂದಿರ, ಕೇಸರಿ ಶಾಲು ವಿಚಾರದಲ್ಲಿ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮುತಾಲಿಕ್‌ ಸುನಿಲ್ ಕುಮಾರ್ ಈ ಸ್ಥಾನಕ್ಕೇರಲು ಕೇಸರಿ ಶಾಲು, ಹಿಂದುತ್ವ ಕಾರಣ. ರಾಮ ಮಂದಿರ ಹೋರಾಟ ಹಿಂದುತ್ವದ ಪ್ರತೀಕ. ಅಧಿಕಾರ ಬಂದ ಬಳಿಕ ಸುನಿಲ್ ಕುಮಾರ್‌ಗೆ ಇದೆಲ್ಲ ಮರೆತು ಹೋಗಿರಬಹುದು. ಕೇಸರಿ ಶಾಲು ಹಾಕಿ ದತ್ತಪೀಠ ಹೋರಾಟ ಮಾಡಿರೋದು ಮರೆತು ಹೋಯ್ತಾ? ಹಿಂದುತ್ವ ಅಂದ್ರೆ ದುಡ್ಡು ಮಾಡೋದು ಸೊಕ್ಕು ತೋರಿಸೋದು ಅಲ್ಲ. ಸುನೀಲ್ ಕುಮಾರ್ ಈ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೇಳಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಮುತಾಲಿಕ್‌ ಎಚ್ಚರಿಸಿದ್ದಾರೆ.

Related posts

ಮಂಗಳೂರು: ಇಬ್ಬರ ಬೆತ್ತಲಾಗಿಸಿ ವಿಡಿಯೋ ಚಿತ್ರಿಸಿ 10 ಲಕ್ಷ ರೂ. ದೋಚಿದ ಯುವತಿ..! ಕತ್ತಲಲ್ಲಿ ಕಳ್ಳಾಟ ಆಡಿದ ಯುವತಿ ಆ್ಯಂಡ್ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?

ಸುಳ್ಯ: ತಾಲೂಕು ಮಟ್ಟದ ದಸರಾ ಥ್ರೋಬಾಲ್ ಕ್ರೀಡಾಕೂಟ, ಪ್ರಚಂಡ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ನಾಗಶ್ರೀ ಫ್ರೆಂಡ್ಸ್

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ, ಕೊನೆಗೂ ಸೋಲಿಗೆ ಹೊಣೆ ಹೊತ್ತ ಕಟೀಲ್