Uncategorized

ಜಮ್ಮು-ಕಾಶ್ಮೀರ: ಕರ್ತವ್ಯದಲ್ಲಿದ್ದಾಗ ಹಾವು ಕಚ್ಚಿ ಮೃತಪಟ್ಟ ಯೋಧ, ಕಣ್ಣೀರಾದ ಕುಟುಂಬ

ಬಾಗಲಕೋಟೆ: ಜಮ್ಮು-ಕಾಶ್ಮೀರದಲ್ಲಿ ಹಾವು ಕಚ್ಚಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ  ಯೋಧರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಯೋಧನ ಹೆಸರು ಚಿದಾನಂದ್ ಹಲಕುರ್ಕಿ. ಅವರಿಗೆ 25 ವರ್ಷವಾಗಿತ್ತು.

ಕರ್ತವ್ಯದಲ್ಲಿದ್ದಾಗಲೇ ಹಾವು ಕಡಿತದಿಂದ ಯೋಧ ಸಾವನ್ನಪ್ಪಿದ್ದಾರೆ. ಮೃತಯೋಧ ಕಳೆದ 6 ವರ್ಷಗಳಿಂದ ಮರಾಠಾ ರೆಜಿಮೆಂಟ್ ಸೈನಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಯೋಧ ಚಿದಾನಂದ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಯೋಧನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಜಮ್ಮು-ಕಾಶ್ಮೀರದಿಂದ ಸ್ವಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಶನಿವಾರ ತಲುಪುವ ಸಾಧ್ಯತೆ ಇದೆ. 

Related posts

ಬೆಕ್ಕಿಗಾಗಿ ಬರೋಬ್ಬರಿ 7 ಲಕ್ಷ ರೂ. ಖರ್ಚು ಮಾಡಿದ ಯುವತಿ

ಜ್ಯೋತಿಷಿ ಮಾತು ಕೇಳಿ ಮೇಕೆಯ ಜತೆ ಮದುವೆಯಾದ ಯುವಕ..!

ಮೋದಿಯವರೇ ಅಚ್ಛೇ ದಿನ್ ಯಾವಾಗ?- ‌ಸಿದ್ದರಾಮಯ್ಯ ತಿವಿತ