ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಿದ್ದ ವೀಕೆಂಡ್ ಕರ್ಫ್ಯೂ ರದ್ದು, ರಾತ್ರಿ ಕರ್ಫ್ಯೂ ಎಂದಿನಂತೆ ಮುಂದುವರಿಕೆ

ಮಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಲಾಗಿದ್ದ ವಾರಾಂತ್ಯದ ಕರ್ಫ್ಯೂ ರದ್ದುಗೊಳಿಸಲಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ರಾತ್ರಿ ಕರ್ಪ್ಯೂ ಎಂದಿನಂತೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡ 2 ರ ಆಸುಪಾಸಿನಲ್ಲೇ ಇದೆ. ಈ ಹಿನ್ನಲೆ ಜಿಲ್ಲೆಯಲ್ಲಿ ವಿಕೇಂಡ್ ಕರ್ಫ್ಯೂ ಮುಂದುವರೆಸಲಾಗಿತ್ತು. ಆದರೆ ವಿಕೇಂಡ್ ಕರ್ಫ್ಯೂನಿಂದಾಗಿ ವರ್ತಕರು ಬಾರಿ ನಷ್ಟ ಅನುಭವಿಸಿದ್ದಾರೆ. ವಿಕೇಂಡ್ ಕರ್ಫ್ಯೂ ತೆರವಿಗೆ ಕಳೆದ ವಾರ ರಾಜ್ಯ ಸರಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಿದ್ದರು. ಈ ಹಿನ್ನಲೆ ಇದೀಗ ವಿಕೇಂಡ್ ಕರ್ಫ್ಯೂ ತೆರವಾಗಿದ್ದು, ರಾತ್ರಿ ಕರ್ಫ್ಯೂ 9 ರಿಂದ ಬೆಳಿಗ್ಗೆ 5 ರವರೆಗೆ ಮುಂದುವರೆದಿದೆ.

Related posts

ಗಂಡನ ಕಣ್ಣಿಗೆ ಮಣ್ಣೆರಚಿ ಪತ್ನಿ ಪರಾರಿ..!

ರಾಜ್ಯ ಮಟ್ಟದ ಚುಂಚಾದ್ರಿ ಕ್ರೀಡೋತ್ಸವ: ಜಗದ್ಗುರು ಶ್ರೀ ನಿರ್ಮಲನಂದನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿ

ಸುಳ್ಯ:NMC ರಾಷ್ಟ್ರೀಯ ಸೇವಾ ಯೋಜನೆ ಘಟಕ, ವರ್ತಕರ ಸಂಘದ ಸಹಯೋಗದೊಂದಿಗೆ ಸ್ವಚ್ಚತಾ ಕಾರ್ಯಕ್ರಮ-‘ದೀಪಾವಳಿ ವಿಥ್ ಮೈ ಭಾರತ್’ಗೆ ಭಾರಿ ಮೆಚ್ಚುಗೆ