ಕರಾವಳಿ

ಎರಡು ಲಾರಿಯಲ್ಲಿ ಅಕ್ರಮವಾಗಿ ಗೋವು ಸಾಗಾಟ..? ಜಾಲ್ಸೂರು ಬಳಿ ಸ್ಥಳೀಯರ ಮಿಂಚಿನ ದಾಳಿ..! ಪೊಲೀಸರಿಂದ ತನಿಖೆ

ನ್ಯೂಸ್ ನಾಟೌಟ್ : ಗೋವುಗಳನ್ನು ಕದ್ದು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಸುಳ್ಯ ಸಮೀಪದ ಜಾಲ್ಸೂರಿನ ಬಳಿ ಹಿಡಿಯಲಾಗಿದೆ. ಗೋವುಗಳನ್ನು ಕದ್ದು ಮೈಸೂರಿನ ಕಡೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ.

ಸ್ಥಳೀಯರು ಕಾರ್ಯಾಚರಣೆ ನಡೆಸಿ ಲಾರಿಯನ್ನು ತಡೆದಿದ್ದಾರೆ. ವಿಟ್ಲದಿಂದ ಚಾಮರಾಜನಗರಕ್ಕೆ ಗೋವುಗಳನ್ನು ಲಾರಿಗೆ ತುಂಬಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಎರಡು ಲಾರಿ ಸೇರಿ ಒಟ್ಟು 15ಕ್ಕೂ ಹೆಚ್ಚು ಗೋವುಗಳು ಇದ್ದಾವೆ ಎಂದು ತಿಳಿದು ಬಂದಿದೆ. ಈ ಗೋವುಗಳನ್ನು ರಾತ್ರಿ 10 ಗಂಟೆಗೆ ಚಾಮರಾಜನಗರಕ್ಕೆ ತಲುಪಿಸುವುದಕ್ಕೆ ಅನುಮತಿ ಪಡೆಯಲಾಗಿದೆ. ಆದರೆ ಈ ಕಾನೂನು ಮೀರಿ ಲಾರಿ ಚಾಲಕರು ತಡವಾಗಿ ತೆಗೆದುಕೊಂಡು ಹೋಗುತ್ತಿರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಸಂಪಾಜೆ: ಸ್ಕೂಟಿ-ಜೀಪ್ ಡಿಕ್ಕಿ, ಪಂಚಾಯತ್ ಸದಸ್ಯ ಪವಾಡ ಸದೃಶ ಪಾರು

ಸಂಪಾಜೆ ಗ್ರಾಮ ಪಂಚಾಯತ್‌ಗೆ ಗಾಂಧಿ ಗ್ರಾಮ ಪುರಸ್ಕಾರದ ಮೊತ್ತ ಬಿಡುಗಡೆ

ಚಿಕ್ಕಮಗಳೂರು ಪ್ರವಾಸವನ್ನು15 ದಿನ ಮುಂದೂಡುವಂತೆ ಜಿಲ್ಲಾಡಳಿತ ಮನವಿ..! ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಮಳೆಯ ಜೊತೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ..!