ಕ್ರೈಂವೈರಲ್ ನ್ಯೂಸ್

ಜೈಲು ಸೇರ್ತಾರಾ ಸೋನು ಶ್ರೀನಿವಾಸ್ ಗೌಡ..? ಕಸ್ಟಡಿ ಅವಧಿ ಮುಕ್ತಾಯ..! ಇಲ್ಲಿದೆ ತನಿಖೆಯ ಮಾಹಿತಿ

ನ್ಯೂಸ್ ನಾಟೌಟ್: ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್ ಸ್ಟಾರ್, ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಪೊಲೀಸ್ ಕಸ್ಟಡಿ ಇಂದಿಗೆ(ಮಾ.25) ಅಂತ್ಯವಾಗಲಿದೆ ಎಮದು ವರದಿ ತಿಳಿಸಿದೆ.

ರಾಯಚೂರು ಮೂಲದ ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣದಲ್ಲಿ ಸೋನು ಬಂಧನಾಗಿದ್ದು, ಮಗುವನ್ನು ಸಹ ರೀಲ್ಸ್‌ನಲ್ಲಿ ಬಳಸಿಕೊಂಡಿದ್ದರು. ಅದರಲ್ಲಿ ಬಂದ ಹಣವನ್ನು ಅವರ ಪೋಷಕರಿಗೆ ಕೊಡುವ ಹೇಳಿಕೆ ನೀಡಿದ್ದರು. ಇದು ಕೂಡ ಕಾನೂನು ಬಾಹಿರ, ಜೊತೆಗೆ ದತ್ತು ಪಡೆಯೋ ಸಂಬಂಧ ಯಾವುದೇ ಕಾನೂನು ಪಾಲನೆ ಮಾಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.

ಒಂದು ವೇಳೆ ದತ್ತು ಪಡೆದರೂ ಆ ಮಗುವಿಗೆ ಸಂಬಂಧಿಸಿದ ಯಾವುದೇ ಗುರುತಿನ ದಾಖಲೆಗಳು ಮತ್ತು ಪೋಷಕರ ಗುರುತು ಬಿಟ್ಟುಕೊಡುವುದು ಕಾನೂನು ಬಾಹಿರ. ಸದ್ಯ 4 ದಿನ ಕಸ್ಟಡಿಗೆ ಪಡೆದ ಬ್ಯಾಡರಹಳ್ಳಿ ಪೊಲೀಸರು, ನಿನ್ನೆಯಷ್ಟೇ (ಮಾ.24, ಭಾನುವಾರ) ರಾಯಚೂರಿಗೆ ಸೋನು ಶ್ರೀನಿವಾಸ್ ಗೌಡರನ್ನ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿ, ಸ್ಥಳೀಯರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದರು. ಇಂದಿಗೆ (ಮಾ. 25, ಸೋಮವಾರ) ಸೋನು ಶ್ರೀನಿವಾಸ್ ಗೌಡರ ಪೊಲೀಸ್ ಕಸ್ಟಡಿ ಅಂತ್ಯ ವಾಗಲಿದ್ದು ಕೋರ್ಟ್ ಮುಂದೆ ಬ್ಯಾಡರಹಳ್ಳಿ ಪೊಲೀಸ್ ಹಾಜರು ಪಡಿಸಲಿದ್ದಾರೆ. ಸದ್ಯ ಸೋನು ಶ್ರೀನಿವಾಸ್‌ ಗೌಡ ವಿರುದ್ಧ ಕಠಿಣ ಸೆಕ್ಷನ್‌ಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿರುವುದರಿಂದ ಬಹುತೇಕ ಜೈಲುಪಾಲಾಗುವುದು ಖಚಿತ ಎನ್ನಲಾಗಿದೆ.

Related posts

ಉಡುಪಿ: ಹೋಟೆಲ್ ಕಾರ್ಮಿಕನನ್ನು ಬಿಯರ್ ಬಾಟಲಿಯ ಚೂರಿನಿಂದ ಕುತ್ತಿಗೆ ಕೊಯ್ದು ಕೊಲೆ..! ಕಾಸರಗೋಡಿನ ಯುವಕನ ದುರಂತ ಅಂತ್ಯ..!

ಮುರುಘಾ ಶ್ರೀಗೆ ಜಾಮೀನು ಸಿಕ್ಕರೂ ಬಿಡುಗಡೆ ಏಕಿಲ್ಲ..? ಮುರುಘಾ ಶ್ರೀ ಪಾಸ್ ಪೋರ್ಟ್ ಕೋರ್ಟ್ ವಶಪಡಿಸಿಕೊಂಡದ್ದೇಕೆ?

ಜೋ ಬೈಡನ್ ಬೆಂಗಾವಲು ಕಾರು ಚಾಲಕನನ್ನು ಬಂಧಿಸಿದ್ದೇಕೆ? ಅರೆಸ್ಟ್ ಆದ ಕಾರು ಚಾಲಕ ಹೇಳಿದ್ದೇನು? ಮುಂದೇನಾಯ್ತು?