ಜೀವನಶೈಲಿ

ಚುಮು ಚುಮು ಚಳಿಗೆ ಹೇಳಿಮಾಡಿಸಿದ ಜಾಕೆಟ್,ಇದರೊಳಗಿದೆ ಹೀಟರ್.. ಏನಿದರ ವಿಶೇಷತೆ ?

ನ್ಯೂಸ್ ನಾಟೌಟ್: ಒಂದು ಕಡೆಯಲ್ಲಿ ಚುಮು ಚುಮು ಚಳಿ, ಮತ್ತೊಂದೆಡೆಯಲ್ಲಿ ಮಳೆ.ಉಣ್ಣೆ ಬಟ್ಟೆ ಹಾಕಿಕೊಂಡರೂ ಚಳಿಯಾಗುತ್ತಲೇ ಇರುತ್ತದೆ. ನಿರಂತರವಾಗಿ ಬೀಸುವ ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಪರಿಹಾರನೇ ಇಲ್ಲವೇ? ಎಂದು ಯೋಚಿಸುವವರಿಗೆ ಒಂದು ಗುಡ್ ನ್ಯೂಸ್ ಬಂದಿದೆ.

ಹೌದು, ಚಳಿಗಾಲಕ್ಕೆ ಎಲ್ಲರಿಗೂ ಹೊಂದಿಕೊಳ್ಳುವಂತಹ ಉಡುಗೆಯೊಂದು ಇದೀಗ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ಹೊಸ ಉಡುಗೆಯಲ್ಲಿ ಹೀಟರ್ ಕೂಡ ಇದೆ ಎಂದರೆ ನೀವು ನಂಬಲೇ ಬೇಕು. ಉಡುಗೆ ಜತೆಗೆ ಹೀಟರ್ ಎರಡನ್ನೂ ಒಂದರಲ್ಲಿ ಪಡೆಯುವ ಜಾಕೆಟ್ ಒಂದು ಈಗ ಮಾರುಕಟ್ಟೆಗೆ ಬಂದಿದ್ದು ಅದರ ಸುದ್ದಿ ವೈರಲ್ ಆಗಿದೆ.

ನೀವು ಜಾಕೆಟ್ ಮತ್ತು ಹೀಟರ್ ಅನ್ನು ಖರೀದಿಸಬೇಕು ಎಂದುಕೊಂಡಿದ್ದರೆ ನೀವು ಒಂದರ ಬೆಲೆಗೆ ಎರಡನ್ನೂ ಪಡೆಯಬಹುದು, ಎಲ್ಲಾ ಕ್ರೆಡಿಟ್ ತಂತ್ರಜ್ಞಾನದ ಪ್ರಗತಿಗೆ ಸಲ್ಲುತ್ತದೆ. ಹೀಟರ್-ಸ್ಥಾಪಿತವಾದ ಜಾಕೆಟ್ ಇತ್ತೀಚೆಗೆ ಅಭಿವೃದ್ದಿಗೊಂಡಿದ್ದು ಮಾರುಕಟ್ಟೆಗೆ ಈಗಾಗಲೇ ಪರಿಚಯವಾಗಿದೆ. ಇದು ಒಂದು ಗುಂಡಿಯನ್ನು ಒತ್ತಿದರೆ ಅತ್ಯಂತ ತಂಪಾಗಿರುವ ಹವಾಮಾನ ಪರಿಸ್ಥಿತಿಗಳಲ್ಲಿಯೂ ಸಹ ಬೆಚ್ಚಗಾಗಲು ಅನುವು ಮಾಡಿಕೊಡುತ್ತದೆ. ಜಾಕೆಟ್ ಅಗ್ಗವಾಗಿಲ್ಲದಿದ್ದರೂ, ಅದರ ಗುಣಮಟ್ಟಕ್ಕೆ ಅದರ ಬೆಲೆ ಒಪ್ಪುವಂತಿದೆ.

ಜಾಕೆಟ್ ಒಳಗೆ, ಐದು ವಿಭಿನ್ನ ತಾಪದ ವಲಯಗಳು ಇಡೀ ದೇಹವನ್ನು ಬಿಸಿಮಾಡಲು ಸಹಾಯ ಮಾಡುತ್ತದೆ. ಭಾರವಾದ ಬಟ್ಟೆಗಳನ್ನು ಹಾಕಿಕೊಳ್ಳುವ ಬದಲು, ಈ ಜಾಕೆಟ್ ಧರಿಸಿ ನೀವು ತಂಪಾದ ವಾತಾವರಣದಲ್ಲಿಯೂ ಕೆಲಸ ಮಾಡಬಹುದು. ಇದರ ಬೆಲೆ 9 ಸಾವಿರ ರೂಪಾಯಿ. ಕೆಲವು ಆನ್‌ಲೈನ್‌ ತಾಣಗಳಲ್ಲಿ 4,316 ರೂಪಾಯಿಗಳಿಗೂ ಲಭ್ಯವಿದೆ.

Related posts

ಅರ್ಧ ಹೆಣ್ಣು, ಅರ್ಧ ಗಂಡು ಹಕ್ಕಿಯನ್ನು ಎಲ್ಲಾದರೂ ನೋಡಿದ್ದೀರಾ? 100 ವರ್ಷ ಅಪರೂಪದ ಅನ್ವೇಷಣೆಯಲ್ಲಿ ಪತ್ತೆಯಾದ ಈ ಹಕ್ಕಿಯ ವಿಶೇಷತೆಗಳೇನು?

ಮದುವೆ ಮಂಟಪದಲ್ಲಿಯೇ ವರನಿಗೆ ರಪರಪನೇ ಬಾರಿಸಿದ ವಧು..!ಮದುವೆಗೆ ಬಂದ ಜನರು ಕೂಡ ವಧುವನ್ನೇ ಬೆಂಬಲಿಸಿದ್ದೇಕೆ?ವಿಡಿಯೋ ವೀಕ್ಷಿಸಿ..

ಮನುಷ್ಯನಿಗಿಂತಲೂ ಫಾಸ್ಟಾಗಿ ಮೊಬೈಲ್ ಆಟ! ತಿನ್ನುತ್ತಾ ಇನ್ಸ್ಟಾಗ್ರಾಮ್ ವೀಕ್ಷಿಸುತ್ತಿರುವ ಕೋತಿ