Latestಕ್ರೈಂರಾಜ್ಯವೈರಲ್ ನ್ಯೂಸ್

ಮದುವೆ ಮಾಡಿಸಿಲ್ಲವೆಂದು ನಿತ್ಯ ಕುಡಿದು ಬಂದು ಮನೆಯವರೊಂದಿಗೆ ಜಗಳ..! ಮನೆಯವರಿಂದಲೇ ಕೊಲೆಯಾದ 25ರ ಯುವಕ..!

555

ನ್ಯೂಸ್ ನಾಟೌಟ್ : ಮದುವೆ ಮಾಡಿಸಿಲ್ಲ ಎಂದು ಕುಡಿದು ಬಂದು ನಿತ್ಯ ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆ ಹಾಗೂ ಹಿರಿಯ ಮಗ ಸೇರಿಕೊಂಡು ಅವನ ತಲೆಗೆ ಕಲ್ಲು ಮತ್ತು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಅಮಾನವೀಯ ಘಟನೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

25 ವರ್ಷದ ಮಂಜುನಾಥ ಉಳ್ಳಾಗಡ್ಡಿ ಎಂಬ ಯುವಕ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಂಜುನಾಥನ ತಂದೆ ನಾಗಪ್ಪ ಉಳ್ಳೆಗಡ್ಡಿ (63) ಮತ್ತು ಅಣ್ಣ ಗುರುಬಸಪ್ಪ ಉಳ್ಳೆಗಡ್ಡಿ (28) ಕ್ರೂರವಾಗಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮಂಜುನಾಥ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು. ಆರಂಭದಲ್ಲಿ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ ಮಂಜುನಾಥ ತನ್ನ ನಿರ್ಧಾರದಲ್ಲಿ ದೃಢವಾಗಿದ್ದರಿಂದ ಕೊನೆಗೆ ಮನೆಯವರು ಒಪ್ಪಿ ನಿಶ್ಚಿತಾರ್ಥ ಮಾಡಿದ್ದರು.

ಇದನ್ನೂ ಓದಿ:ಸೌಜನ್ಯ ಪರ ನಡೆಯಬೇಕಿದ್ದ ಸಮಾಲೋಚನಾ ಸಭೆ ದಿಢೀರ್ ಮುಂದೂಡಿಕೆ..! ಕನ್ನಡ ಸಾಹಿತ್ಯ ಪರಿಷತ್ ಗೆ ಲೀಗಲ್ ನೋಟಿಸ್..!

ಮದುವೆ ಸಿದ್ಧತೆಗಳು ನಿಧಾನವಾಗಿ ನಡೆಯುತ್ತಿವು. ಈ ನಡುವೆ ಮಂಜುನಾಥ ಕುಡಿದ ಮತ್ತಿನಲ್ಲಿ ಆಗಾಗ್ಗೆ ಮದುವೆ ವಿಚಾರವಾಗಿ ಜಗಳ ಮಾಡುತ್ತಿದ್ದನು. ಇದೇ ವಿಚಾರವಾಗಿ ಮತ್ತೆ ಜಗಳ ನಡೆದು ತಂದೆ ಮತ್ತು ಅಣ್ಣ ಸೇರಿ ಮಂಜುನಾಥನ ತಲೆಗೆ ಕಲ್ಲು ಮತ್ತು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:‘ಛಾವಾ’ ಸಿನಿಮಾ ನೋಡಿ ರಾತ್ರಿ ನಿಧಿಗಾಗಿ ಕೋಟೆ ಅಗೆಯಲು ಬಂದ ನೂರಕ್ಕೂ ಹೆಚ್ಚು ಜನ..! ಛತ್ರಪತಿ ಶಿವಾಜಿ ಪುತ್ರನ ಕಥೆಯಲ್ಲಿ ನಿಧಿಯ ಉಲ್ಲೇಖ..!

See also  ಸುಳ್ಯ: ಚಲಿಸುತ್ತಿದ್ದ ಆಟೋ ರಿಕ್ಷಾಗೆ ಇದ್ದಕ್ಕಿದ್ದಂತೆ ಅಡ್ಡ ಬಂದ ಶ್ವಾನ..!, ಬ್ರೇಕ್ ಹಾಕಿದಾಗ ಆಟೋ ರಿಕ್ಷಾ ಪಲ್ಟಿ, ಚಾಲಕನಿಗೆ ಗಾಯ
  Ad Widget   Ad Widget   Ad Widget   Ad Widget   Ad Widget   Ad Widget