ಕರಾವಳಿಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಇಸ್ರೋದಿಂದ ಮಾನವಸಹಿತ ‘ಗಗನಯಾನ’​ದ ಮೊದಲ ಹಾರಾಟ..? ಪರೀಕ್ಷಾ ದಿನಾಂಕ ಘೋಷಿಸಿದ ಇಸ್ರೋ

ನ್ಯೂಸ್ ನಾಟೌಟ್: ಚಂದ್ರಯಾನ, ಸೂರ್ಯಯಾನ ಯೋಜನೆಗಳ ಯಶಸ್ಸಿನಿಂದ ಇತಿಹಾಸ ಸೃಷ್ಟಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಮತ್ತೊಂದು ಮಹತ್ವದ ಯೋಜನೆಗೆ ತಯಾರಿ ಆರಂಭಿಸಿದೆ.

ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮಾನವಸಹಿತ ಗಗನಯಾನ ಮಿಷನ್‌ನ ಮೊದಲ ಪರೀಕ್ಷಾರ್ಥ ಹಾರಾಟವನ್ನು ಅಕ್ಟೋಬರ್ 21 ರಂದು ನಡೆಸಲಿದೆ ಎಂದು ಸೋಮವಾರ ತಿಳಿಸಿದೆ.

ಟಿವಿ-ಡಿ1 ಪರೀಕ್ಷಾ ಹಾರಾಟವನ್ನು ಅಕ್ಟೋಬರ್ 21 ರಂದು ಶ್ರೀಹರಿಕೋಟಾದ ಎಸ್‌ಡಿಎಸ್‌ಸಿ-ಎಸ್​ಎಚ್​ಎಆರ್​ನಿಂದ ಬೆಳಿಗ್ಗೆ 7 ರಿಂದ 9 ರವರೆಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಮೂವರು ಗಗನಯಾತ್ರಿಗಳು ಹಾರಾಟ ನಡೆಸಲಿದ್ದಾರೆ ಎಂದು ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.

2024 ರ ಅಂತ್ಯದ ವೇಳೆಗೆ ಮೂವರು ಗಗನಯಾತ್ರಿಗಳನ್ನು ಕಡಿಮೆ ಭೂಮಿಯ ಕಕ್ಷೆಗೆ ಸೇರಿಸುವ ಪ್ರಯತ್ನದ ಇದಾಗಿದೆ ಎನ್ನಲಾಗಿದ್ದು. ಗಗನಯಾನ ಯೋಜನೆಯ ನಾಲ್ಕು ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಸೋಮನಾಥ್​ ತಿಳಿಸಿದ್ದರು. ಅಕ್ಟೋಬರ್​ 21 ರಂದು ಟಿವಿ-ಡಿ1ನ ಮೊದಲ ಹಾರಾಟ ಪ್ರಯೋಗ ನಡೆಯಲಿದೆ. ಇದಾದ ಬಳಿಕ ಟಿವಿ-ಡಿ2 , ಟಿವಿ-ಡಿ3 ಮತ್ತು ಟಿವಿ-ಡಿ4 ಇನ್ನೂ ಮೂರು ಪ್ರಯೋಗಗಳು ನಡೆಯಲಿವೆ.

ಘನ, ದ್ರವ ಮತ್ತು ಕ್ರಯೋಜೆನಿಕ್​ನ ಮೂರು ಹಂತದೊಂದಿಗೆ ಮಾಡಿರುವ 143 ಅಡಿ ಎತ್ತರದ ಪರೀಕ್ಷಾ ಸಿಬ್ಬಂದಿ ಮಾಡ್ಯೂಲ್​ (ಸಿಎಂ)ನಲ್ಲಿ ಮೂವರು ಗಗನಯಾನಿಗಳು ಇರುತ್ತಾರೆ. ಇದು ಒತ್ತಡ ರಹಿತ ಮಾಡ್ಯೂಲ್​ ಆಗಿದ್ದು, ಬಾಹುಬಲಿ ಎಂದೇ ಖ್ಯಾತಿಯಾದ ಮಾರ್ಕ್-3 (ಎಲ್​ವಿಎಂLVM3) ರಾಕೆಟ್ ಮೂಲಕ ಇದನ್ನು ಉಡಾವಣೆ ಮಾಡಲಾಗುತ್ತದೆ.

ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಬಳಿಕ, ಅಲ್ಲಿಂದ ಕ್ರ್ಯೂ ಎಸ್ಕೇಪ್ ಹಂತಗಳನ್ನು ಪರೀಕ್ಷಿಸಲಾಗುತ್ತದೆ. ಗಗನಯಾನಿಗಳು ಮರಳಿ ಭೂಮಿಗೆ ಲ್ಯಾಂಡ್​ ಆಗಲು ನೌಕೆಯನ್ನು ಸ್ಥಿರಗೊಳಿಸುವ ಮತ್ತು ನಿಧಾನವಾಗಿ ಅದು ಇಳಿಯುವಂತೆ ವಿನ್ಯಾಸಗೊಳಿಸಿದ ಪ್ಯಾರಾಚೂಟ್‌ಗಳು ಮತ್ತು ರಿಕವರಿ ಏಡ್ ಆಕ್ಚುಯೇಶನ್ ಸಿಸ್ಟಮ್‌ಗಳು ಸೇರಿದಂತೆ ಮಿಷನ್‌ನ ಇತರ ಘಟಕಗಳನ್ನು ಈ ಹಾರಾಟ ಪರೀಕ್ಷೆಗೆ ಒಳಪಡಿಸಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

Related posts

ವಾಯುಸೇನೆಯಲ್ಲಿ ಹಲವು​ ಹುದ್ದೆಗಳಿಗೆ ನೇಮಕಾತಿ ಆರಂಭ, ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ನಾನದ ಕೋಣೆಯ ಗೋಡೆ ಕುಸಿದು ಮಹಿಳೆ ದುರಂತ ಅಂತ್ಯ ! ನಾಲ್ವರು ಮಕ್ಕಳನ್ನು ಅಗಲಿದ ಬಡ ತಾಯಿ!

ವಿಜಯ್ ಮಲ್ಯ ಮತ್ತು ನೀರವ್ ಮೋದಿಯ 14,131 ಕೋಟಿ ಆಸ್ತಿ ಬ್ಯಾಂಕ್‌ ಗಳಿಗೆ ಹಸ್ತಾಂತರ, 22,280 ಕೋಟಿ ಮೌಲ್ಯದ ಆಸ್ತಿ ಜಪ್ತಿ