ಕ್ರೈಂದೇಶ-ಪ್ರಪಂಚ

ಇಸ್ಲಾಮಾಬಾದ್ ಹೈಕೋರ್ಟ್ ಹೊರಗೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ! ಬಂಧನವಲ್ಲ ಅಪಹರಣ ಎಂದು ಆರೋಪ!

ನ್ಯೂಸ್ ನಾಟೌಟ್:  ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅರೆಸೇನಾ ಪಡೆಗಳು ವಶಕ್ಕೆ ಪಡೆದಿವೆ ಎಂದು ಮಂಗಳವಾರ ವರದಿ ತಿಳಿಸಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಇಸ್ಲಾಮಾಬಾದ್‌ನ ನ್ಯಾಯಾಲಯದ ಆವರಣದಿಂದ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

“ಇಸ್ಲಾಮಾಬಾದ್ ಹೈಕೋರ್ಟ್ ಅನ್ನು ರೇಂಜರ್‌ಗಳು ಆಕ್ರಮಿಸಿಕೊಂಡಿದ್ದರು, ವಕೀಲರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ, ಇಮ್ರಾನ್ ಖಾನ್ ಅವರ ಕಾರನ್ನು ಸುತ್ತುವರಿಯಲಾಗಿತ್ತು” ಎಂದು ಇಮ್ರಾನ್ ಖಾನ್ ಅವರ ಸಹಾಯಕ ಮತ್ತು ಅವರ ಪಕ್ಷದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಾಯಕ ಫವಾದ್ ಚೌಧರಿ ಟ್ವೀಟ್ ಮಾಡಿದ್ದಾರೆ. ಇಸ್ಲಾಮಾಬಾದ್ ಹೈಕೋರ್ಟ್‌ನ ಒಳಗಿನಿಂದ ಇಮ್ರಾನ್ ಖಾನ್ ಅವರನ್ನು ರೇಂಜರ್‌ಗಳು ಅಪಹರಿಸಿದ್ದಾರೆ ಎನ್ನಲಾಗಿದೆ.

ತಕ್ಷಣವೇ ಪಾಕಿಸ್ತಾನದಾದ್ಯಂತ ಪ್ರತಿಭಟನೆ ಆರಂಭಿಸುವಂತೆ ಪಕ್ಷ ಕರೆ ನೀಡಿದೆ ಎಂದು ಪಿಟಿಐ ನಾಯಕ ಅಜರ್ ಮಶ್ವಾನಿ ಟ್ವೀಟ್ ಮಾಡಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ಇಮ್ರಾನ್ ಖಾನ್ ಅವರ ವಕೀಲರು “ತೀವ್ರವಾಗಿ ಗಾಯಗೊಂಡಿದ್ದಾರೆ” ಎಂದು ಹೇಳಲಾಗಿದೆ.

Related posts

1963ರಲ್ಲಿ ಪೆಟ್ರೋಲ್ ಖರೀದಿಸಿದ ಬಿಲ್ ವೈರಲ್..! 60 ವರ್ಷಗಳ ಹಿಂದೆ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ..?

ಪುತ್ತೂರು: ರೈಲಿನಡಿಗೆ ಬಿದ್ದು ಅಪರಿಚಿತ ವ್ಯಕ್ತಿ ಸಾವು, ಕೈ ಕಾಲು ಪೀಸ್..ಪೀಸ್ ಆದ ರೀತಿಯಲ್ಲಿ ಕಂಡು ಬಂದ ಮೃತದೇಹ

ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕ್ರೂರಿ, ಬೆಚ್ಚಿಬಿದ್ದ ಜನತೆ! ಏನಿದು ವಿಚಿತ್ರ ದ್ವೇಷದ ಕಥೆ!