ದೇಶ-ಪ್ರಪಂಚ

ಇದೆಲ್ಲ ನನ್ನ ಹತ್ತಿರ ನಡೆಯಲ್ಲ, ನೀನು ಏನು ಮಾಡ್ತೀಯಾ…ಕರ್ನಾಟಕದ ಸಿಂಗಂ ಗರಂ..!

ನ್ಯೂಸ್ ನಾಟೌಟ್: ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಐಪಿಎಸ್‌ ಅಧಿಕಾರಿ ಹಾಲಿ ತಮಿಳುನಾಡಿನ ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಬಗ್ಗೆ ಕರ್ನಾಟಕದ ಪ್ರತಿಯೊಬ್ಬರಿಗೂ ಚೆನ್ನಾಗಿಯೇ ಗೊತ್ತು. ಅತ್ಯಂತ ಖಡಕ್ ಪೊಲೀಸ್ ಅಧಿಕಾರಿಯಾಗಿ ಹೆಸರು ಮಾಡಿದ್ದ ಕೆ. ಅಣ್ಣಾಮಲೈ ಇದೀಗ ತಮಿಳುನಾಡಿನ ಬಿಜೆಪಿಯ ಪ್ರಬಲ ನಾಯಕರಾಗಿದ್ದಾರೆ. ಇವರನ್ನು ಸಿಎಂ ಅಭ್ಯರ್ಥಿಯೆಂದೇ ಬಿಂಬಿಸಲಾಗುತ್ತಿದೆ. ಅಂತಹ ನಾಯಕ ಪತ್ರಿಕಾಗೋಷ್ಠಿಯಲ್ಲಿ ಖಾಸಗಿ ಮಾಧ್ಯಮವೊಂದರ ಪ್ರತಿನಿಧಿ ವಿರುದ್ಧ ಬಹಿರಂಗವಾಗಿ ಗರಂ ಆದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಕೆ.ಅಣ್ಣಾಮಲೈ ಕುಳಿತಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಅಣ್ಣಾಮಲೈ ಕುರಿತು, ನೀವು ಅನೇಕ ಆರೋಪಗಳನ್ನು ಡಿಎಂಕೆ ಪಕ್ಷದ ಮೇಲೆ ಮಾಡಿದ್ದೀರಿ. ಆದರೆ ನೀವು ಯಾವುದೇ ಆಧಾರಗಳನ್ನು ಕೊಟ್ಟಿಲ್ಲ? ಎಂದು ಕೇಳುತ್ತಾರೆ. ಇದರಿಂದ ಸಿಟ್ಟಾದ ಅಣ್ಣಾಮಲೈ, ಅಣ್ಣಾ ನಿನಗೆ ಒಂದು ಮಾತು ಹೇಳ್ತಿನಿ, ನೀನು ತೂಕಡಿಸುತ್ತಾ ಇದ್ದೀಯಾ, ಯಾವ ಆಧಾರಕೊಟ್ಟಿಲ್ಲ. ಯಾವ ಆಧಾರ ಕೊಟ್ಟಿಲ್ಲ. ಬಿಜೆಆರ್‌ ಎನರ್ಜಿ ಡಾಕ್ಯುಮೆಂಟ್ ಕೊಟ್ಟಿಲ್ವಾ? ಅಣ್ಣಾ ಒಂದು ನಿಮಿಷ ನಾನು ಹೇಳೋದನ್ನು ಕೇಳು. ಇದನ್ನ ಮುಗಿಸಿ ನನ್ನ ಜೊತೆ ಅರ್ಧ ಗಂಟೆ ಒಳಗಡೆ ಬಾ. ನಿಮ್ಮ ಟಿವಿಯಲ್ಲಿ ಅರ್ಧ ಗಂಟೆ ನಾನು ಕೊಟ್ಟಿರುವ ಡಾಕ್ಯುಮೆಂಟ್‌ ಅನ್ನು ಹಾಕಬೇಕು. ಆನಂತರ ನನ್ನ ಜೊತೆ ಮಾತನಾಡಬೇಕು. ಅದನ್ನು ಬಿಟ್ಟು ಇಲ್ಲಿ ಬಂದು ಸುಮ್ಮನೆ ಪ್ರಶ್ನೆ ಕೇಳಬಾರದು. ನೀನು ಇಲ್ಲಿ ನನ್ನನ್ನು ಹೆದರಿಸುತ್ತಿದ್ದೀಯಾ? ಟೀವಿ ಅವರು ಅಂದ್ರೆ ನಾನು ಹೆದರಬೇಕಾ? ಪತ್ರಕರ್ತನಾಗಿ ಒಂದು ಕೆಲಸವನ್ನಾದರೂ ಸರಿ ಮಾಡಿ? ಕಡೆ ಪಕ್ಷ ತೆಗೆದುಕೊಳ್ಳುವ ಸಂಬಳಕ್ಕಾದರೂ ಸರಿಯಾಗಿ ಕೆಲಸ ಮಾಡಿ. ನಿನಗೆ ಡಾಕ್ಯುಮೆಂಟ್‌ ಸಂಗ್ರಹ ಮಾಡೋಕೆ ಆಗಲ್ವಾ? ನೀನು ಒಬ್ಬ ಪತ್ರಕರ್ತನಾಗಿ ಏಕೆ ಇದ್ದೀಯಾ? ನಿನ್ನ ಬೆದರಿಕೆಯನ್ನು ಬೇರೆಯವರ ಹತ್ರ ಇಟ್ಟುಕೋ ನನ್ನ ಹತ್ತಿರ ಬೇಡ ಎಂದು ಸಿಂಗಂ ಗುಡುಗಿದ್ದಾರೆ.

Related posts

ರಣ ಭೀಕರ ಮಳೆಗೆ ಪ್ರವಾಹ ಸೃಷ್ಟಿ ,ಕಟ್ಟಡದಲ್ಲಿ ಸಿಲುಕಿದ್ದ 730 ವಿದ್ಯಾರ್ಥಿನಿಯರ ರಕ್ಷಣೆ,ರೋಚಕ ವಿಡಿಯೋ ಇಲ್ಲಿದೆ

ಕೇವಲ 24 ವರ್ಷಕ್ಕೆ ಈ ಚೆಲ್ವೆ ಅನುಮಾನಾಸ್ಪದ ರೀತಿಯಲ್ಲಿ ಕೊನೆಯುಸಿರೆಳೆಯಲು ಕಾರಣವೇನು?ಈಕೆಯ ಆಪ್ತ ಸ್ನೇಹಿತ ಹೇಳಿದ್ದೇನು?

ಬಿಜೆಪಿ ಮುಖಂಡ   ಮಣಿಕಂಠ್ ರಾಠೋಡ್ ಮೇಲೆ ಹಲ್ಲೆಗೆ ಯತ್ನ ! ಎರಡು ಗುಂಪುಗಳ ನಡುವೆ ಘರ್ಷಣೆ