Latestದೇಶ-ವಿದೇಶವೈರಲ್ ನ್ಯೂಸ್

ಇನ್ನುಮುಂದೆ ಐಫೋನ್ ಗಳಲ್ಲಿ ಚಾರ್ಜಿಂಗ್ ಪೋರ್ಟ್ ಯೇ ಇರೋದಿಲ್ಲ..! ಈ ಬಗ್ಗೆ ಕಂಪನಿ ಹೇಳಿದ್ದೇನು..?

1.2k

ನ್ಯೂಸ್ ನಾಟೌಟ್: ಆ್ಯಪಲ್ ಕಂಪನಿ ತನ್ನ ಸ್ಮಾರ್ಟ್​ಫೋನ್ ​ಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಮುಂದಾಗಿದೆ. ಐಫೋನ್ 17 ಏರ್ ವಿನ್ಯಾಸವನ್ನು ಅಪ್‌ ಗ್ರೇಡ್ ಮಾಡಲು ಸಿದ್ಧತೆಗಳು ನಡೆಯುತ್ತಿವೆ ಮತ್ತು ಕಂಪನಿಯು ಈ ಫೋನ್ ಅನ್ನು ಚಾರ್ಜಿಂಗ್ ಪೋರ್ಟ್ ಇಲ್ಲದೆ ಬಿಡುಗಡೆ ಮಾಡಬಹುದು ಎಂದು ವರದಿ ತಿಳಿಸಿದೆ.

ಕಂಪನಿಯು ಭವಿಷ್ಯದ ವಿನ್ಯಾಸದ ಮೇಲೆ ಕೆಲಸ ಮಾಡುತ್ತಿದೆ ಮತ್ತು ಮುಂಬರುವ ಹೊಸ ಐಫೋನ್ ಪೋರ್ಟ್ ಇಲ್ಲದೆ ನೀಡಲು ಯೋಜಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಆಪಲ್ ಪೋರ್ಟ್-ಲೆಸ್ ಐಫೋನ್ ತಯಾರಿಸುವ ಬಗ್ಗೆ ಯೋಚಿಸುತ್ತಿದೆ, ಈಗ ಕಂಪನಿಯು ನಿಧಾನವಾಗಿ ವೈರ್‌ ಲೆಸ್ ಪರಿಸರ ವ್ಯವಸ್ಥೆಯತ್ತ ಸಾಗುತ್ತಿರುವಂತೆ ತೋರುತ್ತಿದೆ, ಇದರಲ್ಲಿ ಮ್ಯಾಗ್‌ ಸೇಫ್ ಚಾರ್ಜಿಂಗ್ ಅನ್ನು ಮುಂದುವರೆಸಲಾಗುತ್ತಿದೆ ಮತ್ತು ವೈರ್‌ ಲೆಸ್ ಡೇಟಾ ವರ್ಗಾವಣೆ ವೇಗವನ್ನು ಸುಧಾರಿಸುವತ್ತ ಕೆಲಸ ಮಾಡಲಾಗುತ್ತಿದೆ ಎನ್ನಲಾಗಿದೆ.

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಐಫೋನ್ 17 ಏರ್ ಯಶಸ್ವಿಯಾದರೆ, ಭವಿಷ್ಯದಲ್ಲಿ ಕಂಪನಿಯು ಸಂಪೂರ್ಣವಾಗಿ ಪೋರ್ಟ್-ಮುಕ್ತ ಮಾದರಿಗಳನ್ನು ಬಿಡುಗಡೆ ಮಾಡುವತ್ತ ಗಮನ ಹರಿಸುತ್ತದೆ ಎಂದು ಆಪಲ್ ಅಧಿಕಾರಿಗಳು ಯೋಜನೆ ಮಾಡಿದ್ದಾರೆ.
ಕಂಪನಿಯು ಈ ಹಿಂದೆ ಐಫೋನ್ 7 ನಲ್ಲಿ ಹೆಡ್‌ಫೋನ್ ಜ್ಯಾಕ್ ಅನ್ನು ತೆಗೆದುಹಾಕಿತ್ತು.

ಈಗ ಕಂಪನಿಯ ಚಾರ್ಜಿಂಗ್ ಪೋರ್ಟ್ ಅನ್ನು ತೆಗೆದುಹಾಕಲು ಮುಂದಾಗಿದೆ. ಈ ನಿರ್ಧಾರವು ಪ್ರಯೋಜನಕಾರಿಯಾಗಿದೆ. ಏಕೆಂದರೆ ಪೋರ್ಟ್ ಇಲ್ಲದಿದ್ದರೆ ಫೋನ್ ಒಳಗೆ ನೀರು ಮತ್ತು ಧೂಳು ಪ್ರವೇಶಿಸಲು ಯಾವುದೇ ಹೋಲ್ ಇರುವುದಿಲ್ಲ ಎನ್ನಲಾಗಿದೆ.

ವೈರ್ಡ್ ಡೇಟಾ ವರ್ಗಾವಣೆಯನ್ನು ಅವಲಂಬಿಸಿರುವವರಿಗೆ, ವಿಶೇಷವಾಗಿ ಹೆಚ್ಚಿನ ರೆಸಲ್ಯೂಶನ್ ವಿಡಿಯೋಗಳನ್ನು ಶೂಟ್ ಮಾಡುವವರಿಗೆ ಇದು ಒಂದು ಸವಾಲಾಗಿರಬಹುದು. ಅಂತಹ ಜನರಿಗೆ ದೊಡ್ಡ ಫೈಲ್‌ಗಳನ್ನು ವೈರ್‌ಲೆಸ್ ಆಗಿ ವರ್ಗಾಯಿಸುವುದು ಕಷ್ಟವಾಗಬಹುದು.

ಇದನ್ನೂ ಓದಿ:ಕೇವಲ ಒಂದು ವರ್ಷಕ್ಕೆ 120 ಕೋಟಿ ರೂ. ತೆರಿಗೆ ಪಾವತಿಸಿದ ಅಮಿತಾಭ್ ಬಚ್ಚನ್..! 82ನೇ ವರ್ಷ ವಯಸ್ಸಿನಲ್ಲೂ ನಟನ ವಾರ್ಷಿಕ ಆದಾಯ ಕಂಡು ಅಧಿಕಾರಿಗಳಿಗೆ ಶಾಕ್..!

See also  ಅಮೆರಿಕದ ದೇಗುಲದಲ್ಲಿ ಮೋದಿ ಹೆಸರಲ್ಲಿ ಪೂಜೆ ಮಾಡಿಸಿದ ಅಣ್ಣಾಮಲೈ..! ಅಮೆರಿಕದಲ್ಲಿರುವ ಉಡುಪಿಯ ಶ್ರೀ ಪುತ್ತಿಗೆ ಮಠದ ಶ್ರೀ ಕೃಷ್ಣ ಮಂದಿರಕ್ಕೆ ಭೇಟಿ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget