ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಕಾರಿನೊಳಗೆ ರೊಮ್ಯಾನ್ಸ್‌, ಗೇರ್‌ ಗೆ ತಾಗಿದ ಕಾಲು, ನದಿ ಉರುಳಿದ ಕಾರು..! ಇಲ್ಲಿದೆ ಇನ್ಟ್ರೆಸ್ಟಿಂಗ್‌ ಕಹಾನಿ

168

ನ್ಯೂಸ್ ನಾಟೌಟ್: ರಸ್ತೆ ಬದಿ, ನಿರ್ಜನ ಪ್ರದೇಶದಲ್ಲಿ ಕಾರು ಸ್ಟಾರ್ಟ್ ಮಾಡಿ ನಿಲ್ಲಿಸಿ ಸರಸದಲ್ಲಿ ತೊಡಗಿದ್ದ ಜೋಡಿಗೆ ಶಾಕ್ ಎದುರಾಗಿದೆ. ನದಿಯ ಪಕ್ಕದಲ್ಲಿರುವ ರಸ್ತೆಯಲ್ಲೇ ಕಾರು ನಿಲ್ಲಿಸಿ ರೊಮ್ಯಾನ್ಸ್‌ನಲ್ಲಿ ತೊಡಗಿದ್ದಾರೆ. ಕಾರಿನ ಹಿಂಭಾಗದ ಸೀಟಿನಲ್ಲಿ ರೊಮ್ಯಾನ್ಸ್‌ನಲ್ಲಿರುವಾಗ ಅಚಾನಕ್ಕಾಗಿ ಕಾಲು ಕಾರಿನ ಗೇರ್ ಲಿವರ್‌ಗೆ ತಾಗಿದೆ. ಪರಿಣಾಮ ಕಾರು ಏಕಾಏಕಿ ಚಲಿಸಿ ನದಿಗೆ ಉರುಳಿ ಬಿದ್ದ ಘಟನೆ ಫಿಲಡೆಲ್ಫಿಯಾದಲ್ಲಿ ನಡೆದಿದೆ.

ನದಿಯ ಪಕ್ಕ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ ಈ ಜೋಡಿ ಸರಿಸುಮಾರು ಬೆಳಗ್ಗೆ 4.15ರ ವೇಳೆಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾರೆ. ರೇಂಜ್ ರೋವರ್ ಕಾರಿನ ಹಿಂಬದಿ ಸೀಟಿಗೆ ತೆರಳಿದ ಈ ಜೋಡಿ ರೊಮ್ಯಾನ್ಸ್‌ನಲ್ಲಿ ಮೈಮರೆತಿದ್ದಾರೆ. ಆದರೆ ಇದರ ನಡುವೆ ಅಚಾನಕ್ಕಾಗಿ ಕಾಲು ಕಾರಿನ ಗೇರ್ ಲಿವರ್‌ಗೆ ತಾಗಿದೆ. ಆಟೋಮ್ಯಾಟಿಕ್ ಕಾರಾಗಿರುವ ಕಾರಣ ಕಾಲು ತಾಗಿದ ಭರದಲ್ಲಿ ರಿವರ್ಸ್ ಗೇರ್‌ಗೆ ಲಿವರ್ ಬಿದ್ದಿದೆ. ತಕ್ಷಣವೇ ಕಾರು ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ.

ಒಂದು ನಿಮಿಷ ಈ ಜೋಡಿಗೆ ಏನಾಗುತ್ತಿದೆ ಎಂದು ಗೊತ್ತಾಗಿಲ್ಲ. ಆದರೆ ಹೆಚ್ಚು ಸಮಯವೂ ಇರಲಿಲ್ಲ. ತಕ್ಷಣವೇ ಸರಸದಲ್ಲಿದ್ದ ಈ ಜೋಡಿ ಎಚ್ಚೆತ್ತುಕೊಂಡಿದೆ. ಇನ್ನೇನು ಕಾರು ನದಿಗೆ ಉರುಳುವ ಮುನ್ನ ಕಾರಿನಿಂದ ಹೊರಗೆ ಹಾರಿದ್ದಾರೆ. ಇದರ ಪರಿಣಾಮ ಇವರಿಬ್ಬರ ಜೀವ ಉಳಿದಿದೆ.
ಸಣ್ಣ ಪುಟ್ಟ ತರಚಿದ ಗಾಯಗಳಿಂದ ಜೋಡಿ ಅಪಾಯದಿಂದ ಪಾರಾಗಿದೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾರೆ. ರಕ್ಷಣಾ ತಂಡದೊಂದಿಗೆ ಆಗಮಿಸಿದ ಪೊಲೀಸರು ಕ್ರೇನ್ ಸಹಾಯದಲ್ಲಿ ನೀರಿನಲ್ಲಿ ಮುಳುಗಿದ ರೇಂಜ್ ರೋವರ್ ಕಾರನ್ನು ಮೇಲಕ್ಕೆ ಎತ್ತಿದ್ದಾರೆ. ಈ ವೇಳೆ ನಡೆದ ಘಟನೆ ವಿವರಿಸಿದ ಜೋಡಿ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ.

Click

https://newsnotout.com/2024/08/arun-kumar-puttila-kannada-news-viral-audio-k-police-station-puttur/
See also  ಕಣ್ಣಿಗೆ ಕಾರದ ಪುಡಿ ಎರಚಿ ಸಹೋದರರಿಗೆ ತಲವಾರು ಬೀಸಿದ ದುಷ್ಕರ್ಮಿಗಳು
  Ad Widget   Ad Widget   Ad Widget   Ad Widget   Ad Widget   Ad Widget   Ad Widget