ಬೆಳ್ತಂಗಡಿ: ಸಹೋದರರಿಬ್ಬರಿಗೆ ಕಾರದ ಪುಡಿ ಎರಚಿ ತಲವಾರ್ ನಿಂದ ಕಡಿದು ಕೊಲ್ಲಲು ದುಷ್ಕರ್ಮಿಗಳು ಪ್ರಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೋವಿಂದೂರು ಶಾಲೆ ಬಳಿ ನವೆಂಬರ್ ೨೩ರ ತಡರಾತ್ರಿ ನಡೆದಿದೆ. ನೆಲ್ಲಿ ಗುಡ್ಡೆ ನಿವಾಸಿಗಳಾದ ರಿಕ್ಷಾ ಚಾಲಕ ಹೈದರ್ ಹಾಗೂ ಅಣ್ಣ ರಫೀಕ್ ಹಲ್ಲೆಗೊಳಗಾದವರು. ಅಶುತೋಷ್ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹಲ್ಲೆಯಿಂದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಹೈದರ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.