ನ್ಯೂಸ್ ನಾಟೌಟ್ : ಉತ್ತರ ಪ್ರದೇಶದಲ್ಲಿ ರೈಲು ಅಪಘಾತ ಸಂಭವಿಸಿದೆ. ಫತೇಪುರ್ ಬಳಿ ಒಂದೇ ರೈಲ್ವೆ ಟ್ರ್ಯಾಕ್ ನಲ್ಲಿ ಎರಡು ಗೂಡ್ಸ್ ರೈಲು ಚಲಿಸಿದ್ದು, ಮುಖಾಮುಖಿ ಡಿಕ್ಕಿಯಾಗಿವೆ. ಘಟನಾ ಸ್ಥಳಕ್ಕೆ ಹಿರಿಯ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು(ಫೆ.04) ಬೆಳಗಿನ ಜಾವ 4 ಗಂಟೆ 30 ನಿಮಿಷಕ್ಕೆ ಫತೇಪುರ್ ಜಿಲ್ಲೆಯಲ್ಲಿ ಈ ರೈಲು ಅವಘಡ ಸಂಭವಿಸಿದೆ. ಫತೇಪುರ್‌ನ ಶುಜಾತ್ಪುರ್ ಮತ್ತು ರುಸಲಾಬಾದ್ ರೈಲು ನಿಲ್ದಾಣಗಳ ಮಧ್ಯೆ ಈ ಅನಾಹುತ ಸಂಭವಿಸಿದೆ. ಒಂದು ಗೂಡ್ಸ್ ರೈಲಿನ ಲೋಕೋ ಪೈಲಟ್ ರೆಡ್ ಸಿಗ್ನಲ್ ದಾಟಿ ಬಂದಿದ್ದು ಈ ಅಪಘಾತ ಕಾರಣ ಎಂದು ಶಂಕಿಸಲಾಗಿದೆ.
ಸ್ಥಳೀಯ ಖಾಗ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಟ್ರ್ಯಾಕ್ ನ ಹೊರಗೆ ಬಿದ್ದಿರುವ ಗೂಡ್ಸ್ ರೈಲಿನ ಎಂಜಿನ್ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ರೈಲ್ವೆ ಅಧಿಕಾರಿಗಳ ಪ್ರಾಥಮಿಕ ಮಾಹಿತಿ ಪ್ರಕಾರ ಒಂದು ಗೂಡ್ಸ್ ರೈಲು ಟ್ರ್ಯಾಕ್ ಮೇಲೆ ನಿಂತಿದ್ದು, ಸಿಗ್ನಲ್ ಗಾಗಿ ಕಾಯುತ್ತಿತ್ತು. ಆ ಸಂದರ್ಭದಲ್ಲಿ ಮತ್ತೊಂದು ಗೂಡ್ಸ್ ರೈಲು ಅದೇ ಟ್ರ್ಯಾಕ್ ನಲ್ಲಿ ವೇಗವಾಗಿ ಬಂದಿದೆ. ನಿಂತಿದ್ದ ಗೂಡ್ಸ್ ರೈಲಿಗೆ ಮತ್ತೊಂದು ಗೂಡ್ಸ್ ರೈಲು ಗುದ್ದಿ ಈ ಅಪಘಾತ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Click
ಕಳ್ಳನಿಗೆ ವಿಶೇಷ ಷರತ್ತಿನ ಮೇಲೆ ಜಾಮೀನು ಮಂಜೂರು..! 200 ಗಿಡ ನೆಟ್ಟು ಪೋಷಿಸಲು ಸೂಚನೆ
ಹಿಂದೂ ವಿದ್ಯಾರ್ಥಿ ಕೈಗೆ ಕಟ್ಟಿದ ದಾರವನ್ನು ಕತ್ತರಿಸಿದ ದಕ್ಷಿಣ ಆಫ್ರಿಕಾದ ಶಿಕ್ಷಕ..! ಹಿಂದೂ ಮಹಾಸಭಾ ಆಕ್ರೋಶ..!
ಮಂಗಳೂರು: ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರ ವಾಕಿಟಾಕಿ ಕಳವು..! ಪ್ರಕರಣ ದಾಖಲು
ಫೆ.12ರಿಂದ ಪ್ರಧಾನಿ ಮೋದಿ ಎರಡು ದಿನಗಳ ಅಮೆರಿಕ ಪ್ರವಾಸ, ನೂತನ ಅಧ್ಯಕ್ಷ ಟ್ರಂಪ್ ಜೊತೆ ಮಾತುಕತೆ