Uncategorized

ಸೈನಿಕರ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ

ನ್ಯೂಸ್ ನಾಟೌಟ್ : ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘ ಹಾಗೂ ಶಿ ಫಾರ್ ಸೊಸೈಟಿ ವತಿಯಿಂದ ಹಾಲಿ ಸೈನಿಕರು, ಮಾಜಿ ಸೈನಿಕರು, ಹುತಾತ್ಮ ಯೋಧರ ಪತ್ನಿಯರು ಸೇರಿದಂತೆ ಬಡ ಜನರಿಗೆ ಅನುಕೂಲವಾಗುವಂತೆ ಉಚಿತ ಕಂಪ್ಯೂಟರ್ ಶಿಕ್ಷಣ ನೀಡುವ ಕಾರ್ಯಕ್ರಮಕ್ಕೆ ಸೋಮವಾರ ಬೆಂಗಳೂರಿನ ವಿಜಯನಗರದಲ್ಲಿ ಚಾಲನೆ ನೀಡಲಾಗಿದೆ.

ಬೇಸಿಕ್ ಅಡ್ವಾನ್ಸ್ ಕೋರ್ಸ್, ಆಫೀಸ್ ಮ್ಯಾನೇಜ್ ಮೆಂಟ್ ಕೋರ್ಸ್ (೨ ತಿಂಗಳು), ಟ್ಯಾಲಿ ಪ್ರೈಂ ವಿತ್ ಜಿಎಸ್ ಟಿ (೨ ತಿಂಗಳು), ಟ್ಯಾಲಿ ಪ್ರೈಮ್ ವಿತ್ ಜಿಎಸ್ ಟಿ ಮತ್ತು ಡೈರೆಕ್ಟ್ ಟ್ಯಾಕ್ಸ್ (೩ ತಿಂಗಳು), ಟ್ಯಾಲಿ ಪೇ ರೋಲ್ ಮತ್ತು ಟ್ಯಾಕ್ಸೇಷನ್, ಸೇರಿದಂತೆ ಹಲವು ಕೋರ್ಸ್ ಗಳಲ್ಲಿ ಅಧ್ಯಯನ ನಡೆಸುವುದಕ್ಕೆ ಅವಕಾಶವಿದೆ. ಸಾರ್ವಜನಿಕರು ಕೂಡ ರಿಯಾಯಿತಿ ದರದಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಹೆಚ್ಚಿನ ಮಾಹಿತಿಗೆ 9900221909, 8867798650,9972159315,9880214083 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Related posts

ಓಮೈಕ್ರಾನ್: ಕರ್ನಾಟಕದಲ್ಲಿ ಡಿ.28ರಿಂದ ರಾತ್ರಿ ಕರ್ಫ್ಯೂ

ಭದ್ರತಾ ವೈಫಲ್ಯವಾಗಿಲ್ಲ ಎಂದ ಪೊಲೀಸರು

ಬಿಸಿಯೂಟದ ಸಾಂಬಾರ್ ಪಾತ್ರೆಗೆ ಬಿದ್ದ 2ನೇ ಕ್ಲಾಸ್ ವಿದ್ಯಾರ್ಥಿನಿ..!ಶಾಲೆಯ ಮುಖ್ಯ ಅಡುಗೆಯವರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ,ಏನಿದು ಹೃದಯವಿದ್ರಾವಕ ಘಟನೆ?