ಕರಾವಳಿ

ಉಗ್ರರಿಂದ ಐದು ಮಂದಿಯ ಜೀವ ಉಳಿಸಿದ ಅರಂತೋಡಿನ ಯೋಧ..!

ನ್ಯೂಸ್ ನಾಟೌಟ್ : ಭಾರತೀಯ ಸೈನ್ಯದಲ್ಲಿ ಹಲವಾರು ಮಂದಿ ವೀರ ಯೋಧರು ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ನಮ್ಮ ಕನ್ನಡಿಗ ಯೋಧರ ಸಂಖ್ಯೆಯೂ ಹೆಚ್ಚಾಗಿದೆ. ಕರಾವಳಿಯೂ ಇತ್ತೀಚಿಗೆ ದೇಶ ಸೇವೆಯಲ್ಲಿ ತನ್ನದೇ ಆದ ಯುವ ಸಮೂಹವನ್ನು ಸೃಷ್ಟಿಸುತ್ತಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಯೋಧರೊಬ್ಬರಿಗೆ ಸೇನಾ ದಿನಾಚರಣೆಯ ಹಿನ್ನೆಲೆಯಲ್ಲಿ ಗೌರವಿಸಿರುವುದು ಸುದ್ದಿಯಾಗಿದೆ.

ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ಐದು ಮಂದಿ ಭಾರತೀಯ ನಾಗರಿಕರನ್ನು ಜಮ್ಮುವಿನಲ್ಲಿ ಉಗ್ರರ ಕಪಿಮುಷ್ಠಿಯಿಂದ ರಕ್ಷಿಸಿದ ಅರಂತೋಡು ಗ್ರಾಮದ ಓ ಟೆಡ್ಕ ಕಮಲಾಕ್ಷ ಅವರ ಪುತ್ರ ಆಕಾಶ್ ಅವರನ್ನು ಭೂಸೇನೆಯ ಸೇನಾಧಿಕಾರಿ ಜನರಲ್ ಮೇಜರ್ ಸನ್ಮಾನಿಸಿದ್ದಾರೆ. ತನ್ನ ಜೀವದ ಹಂಗನ್ನೂ ತೊರೆದು ಐದು ಜೀವ ಉಳಿಸಲು ಹೋರಾಟ ನಡೆಸಿದ ಆಕಾಶ್ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

Related posts

ಮಸೀದಿ ಬಳಿ ಕೇಸರಿ ಧ್ವಜ ಕಟ್ಟಿದ್ದಕ್ಕೆ ಹಲ್ಲೆ ನಡೆಸಿದರಾ..? ಆ ರಾತ್ರಿ ರಾಷ್ಟ್ರೀಯ ಹೆದ್ದಾರಿಯ ಬಳಿ ನಡೆದದ್ದೇನು?

ವಯನಾಡ್ ಭೂಕುಸಿತ: ಮೃತರ ಸಂಖ್ಯೆ 36ಕ್ಕೆ ಏರಿಕೆ..! ಸಿಎಂ ಪಿಣರಾಯಿ ಜತೆ ಮಾತನಾಡಿ ಅಗತ್ಯ ನೆರವಿನ ಭರವಸೆ ನೀಡಿದ ಮೋದಿ

ಸುಳ್ಯ: ಕಾಲು ಜಾರಿ ಬಾವಿಯೊಳಗೆ ಬಿದ್ದ ಶಾಂತಿನಗರದ ಯುವಕ..! ಉಬರಡ್ಕಕ್ಕೆ ತೋಟದ ಕೆಲಸಕ್ಕೆಂದು ಹೋಗಿದ್ದಾಗ ದುರ್ಘಟನೆ..