ದೇಶ-ಪ್ರಪಂಚ

ಭಾರತದಲ್ಲಿ ಡೈನೋಸಾರ್‌ಗಳ 256 ಮೊಟ್ಟೆ ಪತ್ತೆ! ಚಕಿತಗೊಳಿಸಿದ ವಿಜ್ಞಾನಿಗಳ ಮಾಹಿತಿ

ನ್ಯೂಸ್ ನಾಟೌಟ್ :  ವಿಜ್ಞಾನಿಗಳ ಸಂಶೋಧನೆಯಲ್ಲಿ ವಿಚಿತ್ರ ಮತ್ತು ಕುತೂಹಲಕಾರಿ ವಿಷಯವೊಂದು ಬಯಲಾಗಿದೆ. ಮಧ್ಯಪ್ರದೇಶದ ಧರ್‌ ಜಿಲ್ಲೆಯ ಬಾಘ ಮತ್ತು ಕುಕ್ಷಿ ಪ್ರದೇಶದಲ್ಲಿರುವ ನರ್ಮದಾ ನದೀ ಕಣಿವೆಯಲ್ಲಿ; ಡೈನೋಸಾರ್‌ ಮತ್ತು ಟೈಟನೊಸಾರ್‌ಗಳ 256 ಮೊಟ್ಟೆಗಳು ಪತ್ತೆಯಾಗಿವೆ. ಹಾಗೆಯೇ ಡೈನೊಸಾರ್‌ಗಳ ಬೃಹತ್‌ ಗೂಡುಗಳೂ ಕಂಡುಬಂದಿವೆ.

2017ರಿಂದ 2020ರವರೆಗೆ ದೆಹಲಿ ವಿವಿ ಮತ್ತು ಐಐಎಸ್‌ಇಆರ್‌ನ ಕೋಲ್ಕತ-ಭೋಪಾಲ್‌ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಈ ಕುತೂಹಲಕಾರಿ ಸಂಗತಿಗಳು ಪತ್ತೆಯಾಗಿವೆ. ಈ ಅಂಶ “ಪಿಎಲ್‌ಒಎಸ್‌’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಹರ್ಷ ಧಿಮಾನ್‌, ವಿಶಾಲ್‌ ವರ್ಮ, ಗುಂಟುಪಳ್ಳಿ ಪ್ರಸಾದ್‌ ಈ ಶೋಧದಲ್ಲಿ ಪಾಲ್ಗೊಂಡಿದ್ದಾರೆ.ಟೆಥಿಸ್‌ ಸಮುದ್ರ ಮತ್ತು ನರ್ಮದಾ ನದಿಗಳು ಸಂಗಮಿಸುವ ಪ್ರದೇಶದಲ್ಲಿ ಡೈನೋಸಾರ್‌ಗಳ ಮೊಟ್ಟೆಗಳು ಕಂಡುಬಂದಿವೆ.  ಒಂದು ಕಾಲದಲ್ಲಿ ಪೂರ್ವ ಆಫ್ರಿಕಾದ ದ್ವೀಪಗಳ ರಾಷ್ಟ್ರ ಸೀಶೆಲ್ಸ್‌ ಭಾರತಕ್ಕೆ ಅಂಟಿಕೊಂಡಿತ್ತು. ಕಾಲಕ್ರಮೇಣ ಅದು ದೂರಸರಿಯಿತು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

Related posts

ಅಮೆರಿಕದಲ್ಲೂ ರಾಮನಿಗೆ ವಿಶೇಷ ಪೂಜೆ, ಟೆಸ್ಲಾ ಕಾರುಗಳ ಲೈಟ್ ನಲ್ಲಿ ಮೂಡಿದ ರಾಮ ನಾಮ, ಇಲ್ಲಿದೆ ವೈರಲ್ ವಿಡಿಯೋ

ʻಹಮಾರೆ ಬಾರಾಹ್ʼ ಸಿನಿಮಾ ಬಿಡುಗಡೆಗೆ ನಿಷೇಧ ಹೇರಿದ ಕರ್ನಾಟಕ ಸರ್ಕಾರ..! ಸರ್ಕಾರದ ಆದೇಶ ಪ್ರತಿಯಲ್ಲೇನಿದೆ..?

ರಾಷ್ಟ್ರಪತಿಯನ್ನು ಭೇಟಿಯಾದ ನರೇಂದ್ರ ಮೋದಿ, ಎನ್‌ಡಿಎ ಸರ್ಕಾರ ರಚನೆಗೆ ಹಕ್ಕು ಮಂಡನೆ