ಕ್ರೈಂವೈರಲ್ ನ್ಯೂಸ್

ಮುಟ್ಟಿನ ಸಮಸ್ಯೆಯಿಂದ 3 ದಿನ ಚಿಕಿತ್ಸೆ ಬಳಿಕ ಮಹಿಳೆ ಸಾವು, ಆಪರೇಶನ್ ಥಿಯೇಟರ್ ನಲ್ಲಿ ಆಕೆಗೆ ಆಗಿದ್ದೇನು..?

ನ್ಯೂಸ್ ನಾಟೌಟ್ : ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ದುರ್ಘಟನೆ ಸಂಭವಿಸಿದೆ.
3 ದಿನಗಳಿಂದ ಚಿಕಿತ್ಸೆ ಪಡೆದರೂ ಅದು ಫಲಕಾರಿಯಾಗದೆ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬಿಹಾರ ಮೂಲದ ನೋವಾಕುಮಾರಿ (25) ಮೃತ ಮಹಿಳೆ. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಆರ್ಮೋರ್ ಪ್ಲಾಸ್ಟಾ ಮೆಡಿ ಡಿವೈಸ್ ಕಂಪನಿಯಲ್ಲಿ ಆಕೆ ಕೆಲಸ ಮಾಡುತ್ತಿದ್ದರು. ಋತುವಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅತ್ತಿಬೆಲೆ ಸಮೀಪದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ ಸೋಮವಾರ ಅವರನ್ನು ಆಪರೇಶನ್ ಥಿಯೇಟರ್‌ಗೆ ಕರೆದುಕೊಂಡು ಹೋಗಿ 2 ಗಂಟೆಗಳ ಬಳಿಕ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಮೃತ ಮಹಿಳೆಯ ಸಂಬಂಧಿಕರು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಆಗಮಿಸಿದ್ದಾರೆ.

Related posts

ಭಾರತೀಯ ವಾಯುಪಡೆ ವಿಮಾನ ಪತನವಾದದ್ದೇಗೆ..? ಮುಂದೇನಾಯ್ತು..?

ಎರಡನೇ ಮಹಡಿಯಿಂದ ಹುಡುಗನ ತಲೆ ಮೇಲೆ ಬಿದ್ದ ಎಸಿ..! 18 ವರ್ಷದ ಯುವಕ ಸಾವು, ಇನ್ನೋರ್ವ ಗಂಭೀರ..! ಇಲ್ಲಿದೆ ವೈರಲ್ ವಿಡಿಯೋ

ಮಗುವನ್ನು ಗಾಯಗೊಳಿಸಿ ಚರ್ಮರೊಗವೆಂದು ಸುಳ್ಳು ಹೇಳಿದ್ದ ಆಸ್ಪತ್ರೆ ಸಿಬ್ಬಂದಿ..! ಭಾರೀ ಮೊತ್ತದ ದಂಡ ಕಟ್ಟಲು ಆದೇಶ..! ಪ್ರಕರಣ ಬಯಲಾದದ್ದೇಗೆ..?