ಕ್ರೈಂಬೆಂಗಳೂರು

ತಂದೆ ತಾಯಿಯಿಂದಲೇ ಮಗಳ ಹತ್ಯೆ..! ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಹಸ್ಯ!

ನ್ಯೂಸ್ ನಾಟೌಟ್: ಮಗಳಿಂದ ಕಿರುಕುಳವನ್ನು ಸಹಿಸಲಾಗದೆ ತಂದೆ-ತಾಯಿ ಇಬ್ಬರು ಸೇರಿ ಮಗಳನ್ನು ಕೊಲೆಗೈದ ಘಟನೆ ಬೆಂಗಳೂರಿನ ಕೋಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ ೧೫ ರಂದು ನಡೆದಿದೆ.

ಧನಲಕ್ಷಿ ಬಡಾವಣೆ ನಿವಾಸಿ ಆಶಾ(32), ತಂದೆ ರಮೇಶ್ ಹಾಗೂ ತಾಯಿ ಜೊತೆ ವಾಸವಾಗಿದ್ದರು. ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದ ಆಶಾ, ತಂದೆ-ತಾಯಿಗೆ ದಿನನಿತ್ಯವೂ ಕಿರುಕುಳ ನೀಡುತ್ತಿದ್ದರು ಎಂದು ವರದಿ ತಿಳಿಸಿದೆ. ಇದರಿಂದ ಬೇಸತ್ತ ರಮೇಶ್ ಬುಧವಾರ ರಾತ್ರಿ ಮಲಗಿದ್ದ ಮಗಳ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ.

ಸಹಜ ಸಾವೇಂದು ಮನೆಯವರು ಹೇಳಿದ್ದರು. ಆದರೆ ತಲೆಯಲ್ಲಿ ರಕ್ತ ಹೆಪ್ಪು ಗಟ್ಟಿದ್ದನ್ನು ಗಮನಿಸಿದ ಸಂಬಂಧಿಕರು ಅನುಮಾನಗೊಂಡು ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಹೋಗಿ ವಿಚಾರಿಸಿದಾಗ ಪೊಲೀಸರ ಮುಂದೆ ತಂದೆ ತಪ್ಪು ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related posts

ಕಾರ್ಯಾಚರಣೆಯಿಂದ ಹಿಂದಿರುಗುತ್ತಿದ್ದ ಸೇನಾ ವಾಹನವನ್ನು ಸ್ಪೋಟಿಸಿದ ನಕ್ಸಲರು..! 9 ಯೋಧರು ಹುತಾತ್ಮ , ಹಲವು ಯೋಧರು ಆಸ್ಪತ್ರೆಗೆ ದಾಖಲು..!

ಮೊಬೈಲ್ ಬಳಸದಂತೆ ಬೈದ ತಂದೆ, ಮನನೊಂದು 18ರ ಯುವತಿ ನೇಣಿಗೆ ಶರಣು..!

ಮಂಡೆಕೋಲು: ವಿಷ ಕುಡಿದು ಆತ್ಮಹತ್ಯೆಗೆ ಯತ್ನ, ಮಂಗಳೂರು ಆಸ್ಪತ್ರೆಗೆ ಶಿಫ್ಟ್