ಕ್ರೈಂರಾಜಕೀಯ

ಮಾನಸಿಕ ಕಿರುಕುಳ ಆರೋಪ! ಯುವ ಕಾಂಗ್ರೆಸ್ ಮುಖ್ಯಸ್ಥನಿಗೆ ಜಾಮೀನು!

ನ್ಯೂಸ್ ನಾಟೌಟ್ : ಯುವ ಕಾಂಗ್ರೆಸ್ ಮುಖ್ಯಸ್ಥ ಬಿ ವಿ ಶ್ರೀನಿವಾಸ್ ವಿರುದ್ಧ ಅಸ್ಸಾಂನಲ್ಲಿ ದಾಖಲಾದ ಕಿರುಕುಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಶ್ರೀನಿವಾಸ್ ಅವರನ್ನು ಬಂಧನದಿಂದ ರಕ್ಷಿಣೆ ನೀಡಿರುವ ಸುಪ್ರೀಂ ಕೋರ್ಟ್, 50,000 ರೂ.ಗೆ ಜಾಮೀನು ನೀಡುವಂತೆ ಸೂಚಿಸಿದೆ.

ಇದರ ಜೊತೆಗೆ ನ್ಯಾಯಾಲಯವು ಅಸ್ಸಾಂ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ತನಿಖೆಗೆ ಸಹಕರಿಸುವಂತೆ ಯುವ ಕಾಂಗ್ರೆಸ್ ಮುಖ್ಯಸ್ಥ ಬಿ ವಿ ಶ್ರೀನಿವಾಸ್‌ಗೆ ಸೂಚಿಸಿದೆ. ಶ್ರೀನಿವಾಸ್ ವಿರುದ್ಧ ಗುವಾಹಟಿಯಲ್ಲಿ ಏಪ್ರಿಲ್‌ನಲ್ಲಿ ಅಸ್ಸಾಂ ಯೂತ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥೆ ಅಂಕಿತಾ ದತ್ತಾ ಲೈಂಗಿಕ ಕಿರುಕುಳದ ಆರೋಪದಡಿಯಲ್ಲಿ ದೂರು ಸಲ್ಲಿಸಿದ್ದರು. ಶ್ರೀನಿವಾಸ್ ಅವರು ನಿರಂತರವಾಗಿ ತನಗೆ ಕಿರುಕುಳ ನೀಡುತ್ತಿದ್ದರು.

ಅಶ್ಲೀಲ ಮಾತುಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಅಸ್ಸಾಂ ಯುವ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಗಿತಾ ದತ್ತಾ ಅವರು ಪೊಲೀಸ್ ದೂರು ನೀಡಿದ್ದರು. ಅಲ್ಲದೆ ಶ್ರೀನಿವಾಸ್ ವರ್ತನೆ ಬಗ್ಗೆ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಿರಿಯ ನಾಯಕರಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಂಗಿತಾ ದತ್ತಾ ಆರೋಪ ಮಾಡಿದ್ದರು ಎನ್ನಲಾಗಿದೆ.

Related posts

ಪತ್ನಿಯ ಆತ್ಮಹತ್ಯೆ ಸುದ್ದಿ ಕೇಳಿ ಗುಂಡು ಹಾರಿಸಿಕೊಂಡ ಯೋಧ! ಏನಿದು ಕರುಣಾಜಕ ಕಥೆ..? ಅಷ್ಟಕ್ಕೂ ಅಲ್ಲಿ ನಡೆದದ್ದೇನು?

ಪೈಚಾರ್ ಬಳಿ ಆಟೋಗೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ ಚಾಲಕ..! ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಸ್ಥಳೀಯರು..!

ಉಪ್ಪಿನಂಗಡಿ: ಬೀದಿ ನಾಯಿಯ ಭೀಕರ ದಾಳಿಗೆ ಜಿಂಕೆ ಬಲಿ, 6ರಿಂದ 8 ವರ್ಷ ಪ್ರಾಯದ ಜಿಂಕೆಯನ್ನು ಮುಕ್ಕಿ ತಿಂದ ಬೀದಿ ನಾಯಿ..!