ಕರಾವಳಿ

ವೇಣೂರಿನಲ್ಲಿ ಪಟಾಕಿ ಘಟಕ ಸ್ಪೋಟದಿಂದ ಮೂವರ ಸಾವು ಪ್ರಕರಣ,15 ಕೆ.ಜಿಗೆ ಪರವಾನಿಗೆ ಪಡೆದು ನಿಯಮ ಮೀರಿ 100 ಕೆ.ಜಿಯಷ್ಟು ಸ್ಟಾಕ್ ಇಟ್ಟಿದ್ದನೇ ಮಾಲೀಕ ಬಶೀರ್?

ನ್ಯೂಸ್ ನಾಟೌಟ್: ವೇಣೂರಿನಲ್ಲಿ ಪಟಾಕಿ ಘಟಕ ಸ್ಪೋಟದಿಂದ ಮೂವರ ಸಾವು ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ತನಿಖೆ ಮುಂದುವರಿಸಲಾಗಿದೆ. ಘಟನೆಗೆ ಸಂಬಂಧಿಸಿ ಮಹತ್ವದ ಮಾಹಿತಿ ಲಭ್ಯವಾಗಿದೆ.ಬಗೆದಷ್ಟು ಮತ್ತಷ್ಟು ವಿಚಾರಗಳು ಹೊರ ಬರುತ್ತಲೇ ಇದೆ..!

ನಿಯಮ ಮೀರಿ 100 ಕೆ.ಜಿ ಗನ್ ಪೌಡರ್ ದಾಸ್ತಾನು ಮಾಡಿಡಲಾಗಿದೆಯೇ ಅನ್ನುವ ಅನುಮಾನಗಳು ಮೂಡಿ ಬಂದಿದ್ದು, ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ. ಒಂದು ಮಾಹಿತಿ ಪ್ರಕಾರ 15 ಕೆ.ಜಿಗೆ ಪರವಾನಿಗೆ ಪಡೆದು 100 ಕೆ.ಜಿಯಷ್ಟು ಮಾಲೀಕ ಬಶೀರ್ ಸ್ಟಾಕ್ ಇಟ್ಟಿದ್ದ ಎನ್ನಲಾಗಿದೆ.ಪಟಾಕಿಗಾಗಿ ಪೊಟ್ಯಾಸಿಯಂ ಕ್ಲೋರೈಟ್, ಪೊಟ್ಯಾಸಿಯಂ ನೈಟ್ರೇಟ್ ಬಳಕೆ ಮಾಡಲಾಗಿದೆ ಎನ್ನಲಾಗಿದ್ದು,ಪಟಾಕಿ ಲೋಡಿಂಗ್ ವೇಳೆ ಒತ್ತಡ ಉಂಟಾಗಿ ಸ್ಪೋಟವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಅತಿಯಾದ ಸ್ಪೋಟಕ ದಾಸ್ತಾನು ಇಟ್ಟ ಕಾರಣ ಭೀಕರ ಸ್ಪೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು,ಸ್ಪೋಟದ ತೀವ್ರತೆ ಹೆಚ್ಚಾಗಲು ಭಾರೀ ಪ್ರಮಾಣದ ಸ್ಪೋಟಕ ಸ್ಟಾಕ್ ಕಾರಣವೆಂದು ಹೇಳಲಾಗುತ್ತಿದೆ. ಸದ್ಯ 85ಕ್ಕೂ ಹೆಚ್ಚು ಸ್ಯಾಂಪಲ್ ಅನ್ನು ಎಫ್ಎಸ್ಎಲ್ ವಶಕ್ಕೆ ಪಡೆದಿದೆ ಎಂದು ಹೇಳಲಾಗಿದೆ. ಚಾರ್ಕೋಲ್, ಗಂಧಕ, ಅಲ್ಯೂಮಿನಿಯಂ ಪೌಡರ್ ಸಹಿತ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.ಫೈರ್ ಸೇಫ್ಟಿ ಬಳಕೆ ಮಾಡದೇ ನಿಯಮ ಉಲ್ಲಂಘಿಸಿ ಪಟಾಕಿ ತಯಾರಿ ಮಾಡಿ ಮೈಸೂರು ಭಾಗದ ಕಾರ್ಯಕ್ರಮಕ್ಕೆಂದು ರೆಡಿಯಾಗುತ್ತಿತ್ತು ಎನ್ನಲಾಗಿದೆ.ಹೀಗಾಗಿ ಬಶೀರ್ ನಿಯಮ ಉಲ್ಲಂಘಿಸಿ ರಾಸಾಯನಿಕ ದಾಸ್ತಾನು ಇಟ್ಟಿದ್ದ ಎಂದು ಹೇಳಲಾಗುತ್ತಿದೆ. ಸದ್ಯ ಈ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮುಂದುವರಿದಿದೆ.ಅಸಲಿ ವಿಚಾರ ಹೊರ ಬರಬೇಕಿದ್ರೆ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ತಿಳಿದು ಬರಲಿದೆ.

Related posts

ಕಡಬ: 800 ವರ್ಷದ ಹಿಂದಿನ ಕನ್ನಡ ಶಿಲಾ ಶಾಸನ ಪತ್ತೆ, ಶ್ರೀ ಮಹಾವಿಷ್ಣು ಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಸಿಕ್ಕಿದ ಶಾಸನದಲ್ಲಿದೆ ‘ತುಳು ರಾಜ್ಯ’ ಎಂಬ ಉಲ್ಲೇಖ..!

ಮಂಗಳೂರು ವ್ಯಾಪ್ತಿಯಲ್ಲಿ ಇನ್ನು ಪರವಾನಗಿ ಕಡ್ಡಾಯವಿದ್ದರೆ ಮಾತ್ರ ತಂಬಾಕು ಉತ್ಪನ್ನ ಮಾರಾಟ ? !

ಸುಳ್ಯ: ಬಹುನಿರೀಕ್ಷಿತ ಮುರುಳ್ಯ ಗ್ರಾ.ಪಂ. ನೂತನ ಕಟ್ಟಡದ ಉದ್ಘಾಟನೆ,ನಳಿನ್ ಕುಮಾರ್ ಕಟೀಲ್,ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಗಣ್ಯರು ಭಾಗಿ