ದೇಶ-ಪ್ರಪಂಚವೈರಲ್ ನ್ಯೂಸ್

ರೋಬೋಟ್ ಗಳೂ ಆತ್ಮಹತ್ಯೆ ಮಾಡಿಕೊಳ್ತವಾ..? ಏನಿದು ವಿಚಿತ್ರ ಘಟನೆ..?

ನ್ಯೂಸ್‌ ನಾಟೌಟ್: ಮಾನವ ಶ್ರಮ ಕಡಿತಗೊಳಿಸಿ ಯಾಂತ್ರಿಕ ಜೀವನಕ್ಕೆ ಅತಿಯಾಗಿ ಅವಲಂಬನೆಯಾದರೆ ಕೆಲವೊಮ್ಮೆ ಅವಘಡಗಳಾಗುತ್ತವೆ. ದಕ್ಷಿಣ ಕೊರಿಯಾ ಇಂಥದೊಂದು ಘಟನೆಗೆ ಸಾಕ್ಷಿಯಾಗಿದೆ .

ದಕ್ಷಿಣ ಕೊರಿಯಾದ ಗುಮಿ ನಗರಪಾಲಿಕೆಯ ಕಚೇರಿಯ ನಿತ್ಯ ಸೇವೆಗೆ ಬಳಕೆಯಾಗುತ್ತಿದ್ದ ರೋಬೋಟ್‌ ಕೆಲಸದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ರೋಬೋಟ್‌ಗೆ ಹೆಚ್ಚಿನ ಕೆಲಸ ನೀಡಲಾಗಿತ್ತು ಎನ್ನಲಾಗಿದೆ. ಇದರಿಂದ ಒತ್ತಡ ಹೆಚ್ಚಾಗಿ ಎರಡನೇ ಮಹಡಿಯ ಮೆಟ್ಟಿಲುಗಳಿಂದ ಕೆಲಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಘಟನೆಯಿಂದ ರೋಬೋಟ್‌ನ ಹಲವು ಬಿಡಿ ಭಾಗಗಳಿಗೆ ನಾಶವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ರೋಬೊಟ್‌ನ ಬಿಡಿ ಭಾಗಗಳನ್ನು ಸಂಗ್ರಹಿಸಿ ಘಟನೆಯ ಹಿಂದಿನ ಕಾರಣವನ್ನು ಪರಿಶೀಲಿಸಲಾಗುವುದು ಎಂದು ರೋಬೋಟ್‌ ಸಿದ್ಧಪಡಿಸಿದ ಬೇರ್‌ ರೋಬೊಟಿಕ್ಸ್‌ ಕಂಪೆನಿ ತಿಳಿಸಿದೆ.

ರೋಬೋಟ್‌ ಆತ್ಮಹತ್ಯೆ ಪ್ರಕರಣ ದಕ್ಷಿಣ ಕೊರಿಯಾದ ಮೊದಲ ಪ್ರಕರಣವಾಗಿದೆ. ಗುಮಿ ನಗರಪಾಲಿಕೆಯ ಕಚೇರಿಯ ಸೇವೆಗೆ 2023ರಿಂದ ರೋಬೊಟ್‌ ಬಳಕೆಯಾಗುತ್ತಿತ್ತು. ಬೆಳಗ್ಗೆ 9ರಿಂದ ಸಾಯಂಕಾಲ 6ರವರೆಗೆ ಕಚೇರಿಯಲ್ಲಿ ರೋಬೋಟ್‌ ಕಾರ್ಯನಿರ್ವಹಿಸುತ್ತಿತ್ತು. ಕಡತಗಳ ವಿತರಣೆ, ಅಗತ್ಯ ಮಾಹಿತಿಗಳ ಪೂರೈಕೆ ಸೇರಿದಂತೆ ಹಲವು ಕೆಲಸಗಳನ್ನು ನಿರ್ವಹಿಸುತ್ತಿತ್ತು. ರೋಬೋಟ್‌ ಆತ್ಮಹತ್ಯೆ ಪ್ರಕರಣ ದಕ್ಷಿಣ ಕೊರಿಯಾದ ಸ್ಥಳೀಯ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.

Click 👇

https://newsnotout.com/2024/07/google-pay-phone-pay-in-ksrtc-kannada-news-govt-bus-updated-in-terms-of-payment
https://newsnotout.com/2024/07/dengue-kannada-newsfever-8-year-old-girl-nomore-doctors
https://newsnotout.com/2024/07/21-ias-officers-transferred-to-different-districts-and-postions-karnataka-government-order

Related posts

ಉಡುಪಿಯಲ್ಲಿ ಸಮುದ್ರಪಾಲಾಗಿದ್ದ ಬ್ಯಾಂಕ್ ಉದ್ಯೋಗಿ..! ಬೆಂಗಳೂರಿನಿಂದ ಬಂದವನ ಮೃತದೇಹ ಪತ್ತೆ..!

ಪುತ್ತೂರು: ಅದ್ಧೂರಿಯಾಗಿ ಹಿಂದೂ ಗೆಳೆಯನ ‘ಬರ್ತ್ ಡೇ’ ಆಚರಿಸಿದ ಮುಸ್ಲಿಂ ಯುವಕರು, ದಕ್ಷಿಣ ಕನ್ನಡದ ಕೋಮು ಸೌಹಾರ್ದತೆಗೆ ಎಲ್ಲೆಡೆ ಮೆಚ್ಚುಗೆ, ಇಲ್ಲಿದೆ ವೈರಲ್ ವಿಡಿಯೋ

ಉಡುಪಿ: ರಾತ್ರಿ ರಸ್ತೆ ಕಾಮಗಾರಿಯ ಹೊಂಡಕ್ಕೆ ಬಿದ್ದ ಕಾರು..! ಪರಿಶೀಲನೆ ನಡೆಸಿದ ಪೊಲೀಸರು