ಕರಾವಳಿ

ಮಂಗಳೂರಿನಲ್ಲಿ ಅಕ್ರಮ ಚಿನ್ನ ಸಾಗಾಟ ಪತ್ತೆ:ಸಾವಿರವಲ್ಲ,ಲಕ್ಷವಲ್ಲ,ಕೋಟಿಗಟ್ಟಲೆ ಮೌಲ್ಯದ ಚಿನ್ನ ವಶ

ನ್ಯೂಸ್ ನಾಟೌಟ್ : ಮಂಗಳೂರಿನಲ್ಲಿ ಕೋಟಿಗಟ್ಟಲೆ ಮೌಲ್ಯದ ಅಕ್ರಮ ಚಿನ್ನ ಸಾಗಾಟವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿರುವ ಬಗ್ಗೆ ವರದಿಯಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈ ಮತ್ತು ಅಬುಧಾಭಿಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 1,08,28,240 ಅಂದ್ರೆ ಒಂದು ಕೋಟಿ ಎಂಟು ಲಕ್ಷ ಇಪ್ಪತ್ತೆಂಟು ಸಾವಿರದ ಇನ್ನೂರ ನಲವತ್ತು ರೂ.ಮೌಲ್ಯದ ಅಂದಾಜು 1,913 ಗ್ರಾಂ ಚಿನ್ನವನ್ನು ಅಕ್ರಮ ಸಾಗಾಟ ಮಾಡುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಫೆ.16ರಿಂದ 28ರ ಮಧ್ಯೆ ಓರ್ವ ಮಹಿಳೆ ಹಾಗೂ ಆರು ಮಂದಿ ಪುರುಷ ಪ್ರಯಾಣಿಕರನ್ನು ಚಿನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಪತ್ತೆ ಮಾಡಲಾಗಿದೆ. ಆರೋಪಿಗಳು ಚಿನ್ನವನ್ನು ಪೇಸ್ಟ್ ಮಾಡಿ ಟಿ ಶರ್ಟ್‌ನಲ್ಲಿ ಅಳವಡಿಸಿ, ಗುದದ್ವಾರದಲ್ಲಿ ಅಡಗಿಸಿಟ್ಟು ಸಾಗಾಟ ಮಾಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಅಕ್ರಮ ಸಾಗಾಟದ ಚಿನ್ನ ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Related posts

ವಿದ್ಯಾರ್ಥಿಗಳೇ.. ನಾಳೆ ಸ್ವಯಂ ರಜೆ ಪಡೆಯಿರಿ;ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕರೆ ನೀಡಿದ ಪೋಸ್ಟ್ ವೈರಲ್..ಪೋಸ್ಟ್‌ ನಲ್ಲೇನಿದೆ?

ಮಂಗಳೂರು:ಪಾಝಿಲ್ ಸಹೋದರನ ಮೇಲೆ ಹಲ್ಲೆ ಪ್ರಕರಣ,ದೂರು-ಪ್ರತಿದೂರು ದಾಖಲು

ಹೊರಗಡೆ ಹೋದಾಗ ರುಚಿ ರುಚಿಯಾದ ಅವಿಲ್ ಮಿಲ್ಕ್ ಬೇಕೆನಿಸುತ್ತಾ? ಕೇರಳ ಶೈಲಿಯ ಅವಿಲ್ ಮಿಲ್ಕ್ ಇನ್ಮುಂದೆ ಸುಳ್ಯದಲ್ಲಿಯೂ ಲಭ್ಯ..!ಎಲ್ಲಿದೆ?ಏನಿದರ ವಿಶೇಷತೆ?