ನ್ಯೂಸ್ ನಾಟೌಟ್: ಪರವಾನಗಿ ಇಲ್ಲದೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕೇರಳ ನೋಂದಾವಣಿಯ ವಾಹನವನ್ನು ಅಡಗಟ್ಟಿ ವಶಕ್ಕೆ ಪಡೆದುಕೊಂಡ ಘಟನೆ ಗುರುವಾರ ಸಂಜೆ ಸುಳ್ಯದಲ್ಲಿ ನಡೆದಿದೆ.
ಮೂರು ಜಾನುವಾರುಗಳನ್ನು ಟೆಂಪೋದಲ್ಲಿ ತುಂಬಿಕೊಂಡು ಹೋಗುತ್ತಿರುವ ವಿಚಾರ ತಿಳಿದ ಪೊಲೀಸರು ಸುಳ್ಯದ ಪೈಚಾರ್ ಬಳಿ ಓವರ್‌ಟೇಕ್ ಮಾಡಿಕೊಂಡು ಬಂದು ವಾಹನವನ್ನು ಅಡ್ಡಗಟ್ಟಿದ್ದಾರೆ. ವಾಹನಕ್ಕೆ ಟರ್ಪಾಲ್ ಮುಚ್ಚಿತ್ತು. ಟರ್ಪಾಲ್ ತೆಗೆದು ನೋಡಿದಾಗ ವಾಹನದಲ್ಲಿ ಪರವಾನಗಿಯಿಲ್ಲದೆ ಒಂದು ಎಮ್ಮೆ ಹಾಗೂ ಗಂಡು ಕರು, ಒಂದು ಹೆಣ್ಣು ಎಮ್ಮೆ ಕರುವನ್ನು ಸಾಗಾಟ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಜಾನುವಾರು ಸಹಿತ ವಾಹನ, ಚಾಲಕನ್ನು ವಶಕ್ಕೆ ಪಡೆದು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಆದ್ಯಾದೇಶ ಕಾಯ್ದೆ 2020 ರ ಪ್ರಕಾರ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಳ್ಳಾರೆಯಿಂದ ಜಾನುವಾರು ಸಾಗಿಸಿಕೊಂಡು ಕೇರಳಕ್ಕೆ ಹೋಗುತ್ತಿತ್ತು ಎನ್ನಲಾಗಿದೆ. ಪೊಲೀಸರು ಕೇರಳ ರಿಜಿಸ್ಟ್ರೇಶನ್ ಹೊಂದಿದ KL 60 T 7120 ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಚಾಲಕ ಕಾಸರಗೋಡು ಜಿಲ್ಲೆಯ ವೆಳ್ಳೇರಿಕುಂಡ್ ತಾಲೂಕಿನ ಕೊಟ್ಟೋಡಿಯ ಪನ್ನಿತೋಲಂ ನಿವಾಸಿ ರತೀಶ್ (41 ) ಎಂದು ತಿಳಿದುಬಂದಿದೆ.