ನ್ಯೂಸ್ ನಾಟೌಟ್: ಚುನಾವಣೆಗೆ ಇನ್ನೇನು ಎರಡು ದಿನವಷ್ಟೇ ಬಾಕಿ ಇದೆ ಎನ್ನುವಾಗ ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಹಲವು ಆಮಿಷವನ್ನು ತೋರುತ್ತಿವೆ. ಇದೀಗ ಜೆಡಿಎಸ್ ಕೂಡ ಅಂತಹುದ್ದೇ ಕೆಲಸಕ್ಕೆ ಮುಂದಾಗಿದ್ದುಅಧಿಕಾರಕ್ಕೆ ಬಂದರೆ ಮುಕ್ತ ಗೋಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂದು ಘೋಷಿಸಿದೆ.
ಈ ಬಗ್ಗೆ ಹುಮನಾಬಾದ್ ನಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ‘ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಗೋ ಮಾಂಸ ವ್ಯಾಪಾರಕ್ಕೆ ಪರವಾನಗಿ ನೀಡಲಾಗುವುದು’ ಎಂದು ಹೇ ಳಿದರು. ಹಸುಗಳನ್ನು ತಂದರೆ ಅದು ಹಾಲು ನೀ ಡದಿದ್ದರೆ ಮಾರಾಟ ಮಾಡಿ ಮತ್ತೊಂದು ಹಸು ತರಲು ಅನುಕೂಲ ಆಗಲಿದೆ. ಆದರೆ, ಈ ಕಾಯ್ದೆ ಜಾರಿ ಇರುವುದರಿಂದ ರೈತರು ಯಾರಿಗೆ ಮಾರಾಟ ಮಾಡಬೇಕು? ಹಾಗಾಗಿ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಲಾಗುವುದು ಎಂ ದರು. ಜೆಡಿಎಸ್ ಅಭ್ಯರ್ಥಿ ಸಿ.ಎಂ . ಫೈ ಜ್, ಜೆಡಿಎಸ್ ತಾಲೂಕು ಅಧ್ಯಕ್ಷ ಗೌತಮ ಸಾಗರ, ಮುಖಂಡರಾದ ಅಂಕುಶ ಗೋಖಲೆ, ಎ.ಎಂ . ಕುಲಕರ್ಣಿ , ಶಿವಪುತ್ರ ಮಾಳಗೆ ಇದ್ದರು.