ಕ್ರೈಂವೈರಲ್ ನ್ಯೂಸ್

ಇಡ್ಲಿ ತಿನ್ನೋ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಾಣ ಕಳೆದುಕೊಂಡ ವ್ಯಕ್ತಿ..! ಇಡ್ಲಿ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಸಾವು..!

ನ್ಯೂಸ್ ನಾಟೌಟ್: ಇಲ್ಲೊಬ್ಬ ವ್ಯಕ್ತಿ ಓಣಂ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಇಡ್ಲಿ ತಿನ್ನುವ ಕಾಂಪಿಟೇಶನ್‌ನಲ್ಲಿ ನಾನೇ ಗೆಲ್ಬೇಕು ಎಂದು ಒಮ್ಮೆಗೆ ಮೂರು ಇಡ್ಲಿಯನ್ನು ಗಬಗಬನೆ ನುಂಗಲು ಹೋಗಿದ್ದು, ಆ ಸಂದರ್ಭದಲ್ಲಿ ಇಡ್ಲಿ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಈ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದ್ದು, ಸೆಪ್ಟೆಂಬರ್‌ 14 ಶನಿವಾರದಂದು ಇಲ್ಲಿನ ವಳಯಾರ್‌ನಲ್ಲಿ ಓಣಂ ಹಬ್ಬದ ಪ್ರಯುಕ್ತ ಸ್ಥಳೀಯ ಸಂಘಟನೆಯೊಂದು ಇಡ್ಲಿ ತಿನ್ನುವಂತಹ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಗಬಗಬನೇ ಇಡ್ಲಿಯನ್ನು ತಿನ್ನಲು ಹೋಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಅರ್ಜೆಂಟ್‌ ಅಲ್ಲಿ ತಿನ್ನುವಾಗ ಇಡ್ಲಿ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಇದರಿಂದ ಆ ವ್ಯಕ್ತಿ ಉಸಿರಾಡಲು ಪರದಾಡಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದುರಾದೃಷ್ಟವಶಾತ್‌ ಆ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಪಾಲಕ್ಕಾಡ್‌ನ ಅಲಮರಮ್‌ ನಿವಾಸಿ ಸುರೇಶ್‌ (49) ಎಂದು ಗುರುತಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Click

https://newsnotout.com/2024/09/darshan-and-wilson-guarden-naga-kannada-news-viral-news-ccb-police-raid/
https://newsnotout.com/2024/09/doctors-and-kolkatta-case-police-officer-under-arrest-by-cbi-viral-news/
https://newsnotout.com/2024/09/munirathna-case-caste-and-threat-issue-kannada-news-2-days-police-custody/
https://newsnotout.com/2024/09/wife-for-sale-to-repay-the-loan-amount-kannada-news-police-arrested/
https://newsnotout.com/2024/09/cm-siddaramayya-viral-security-issue-news-kannada-vidhana-sowdha/

Related posts

ತಡರಾತ್ರಿ ಸುಳ್ಯದಲ್ಲಿ ಮಡಿಕೇರಿ ಮೂಲದ ವ್ಯಕ್ತಿಯ 3.5 ಲಕ್ಷ ರೂ. ದರೋಡೆ..! ಆಟೋ ರಿಕ್ಷಾ ಏರಿದವನಿಗೆ ಆಪತ್ತು ಎದುರಾಗಿದ್ದು ಹೇಗೆ..?

ರೈಲ್ವೇ ಹಳಿಗಳ ಮೇಲೆ ಕಲ್ಲಿಟ್ಟ ಅಪ್ರಾಪ್ತ ಬಾಲಕ…! ಬಾಲಕನ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಸರ್ಕಾರಿ ನೌಕರರು 2ನೇ ಮದುವೆಯಾಗುವಂತಿಲ್ಲ ಎಂದ ಸರ್ಕಾರ! ಏನಿದು ಹೊಸ ಆದೇಶ?