ರಾಜಕೀಯವೈರಲ್ ನ್ಯೂಸ್

ಹೈದರಾಬಾದ್ ಕಾಂಗ್ರೆಸ್ ವಾರ್ ರೂಂನಲ್ಲಿ ಡಿಕೆಶಿ ರಹಸ್ಯ ಸಭೆ ನಡೆಸುತ್ತಿರುವುದೇಕೆ? ಗೆದ್ದ ಎಲ್ಲಾ ಅಭ್ಯರ್ಥಿಗಳನ್ನು ಕೂಡಲೇ ಹೈದರಾಬಾರ್​ಗೆ ಬರುವಂತೆ ಡಿಕೆಶಿ ಹೇಳಿದ್ದೇಕೆ?

ನ್ಯೂಸ್ ನಾಟೌಟ್: ತೆಲಂಗಾಣ ವಿಧಾನಸಭಾ ಚುನಾವಣೆ ಫಲಿತಾಂಶ (Telangana Election Results) ಪ್ರಕಟವಾಗುತ್ತಿದ್ದು, ಕಾಂಗ್ರೆಸ್ ಮತ್ತು ಬಿಆರ್​​ಎಸ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ.

ಫಲಿತಾಂಶ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar), ಸಚಿವ ಜಮೀರ್ ಅಹ್ಮದ್ ಖಾನ್ ಹೈದರಾಬಾದ್​ನಲ್ಲಿಯೇ ಉಳಿದುಕೊಂಡಿದ್ದಾರೆ. ಚುನಾವಣೆ ಫಲಿತಾಂಶದಲ್ಲಿ ಮುನ್ನಡೆಯ ಅಂಕಿ ಸಂಖ್ಯೆಗಳು ಕ್ಷಣ ಕ್ಷಣಕ್ಕೂ ಕುತೂಹಲ ಸೃಷ್ಟಿಸುತ್ತಿದೆ.

ಈ ಹಿನ್ನೆಲೆ ಹೈದರಾಬಾದ್ ಕಾಂಗ್ರೆಸ್ ವಾರ್ ರೂಮ್​ನಲ್ಲಿ ಡಿಕೆ ಶಿವಕುಮಾರ್ ಮತ್ತು ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಮಹತ್ವದ ಸಭೆಯೊಂದು ನಡೆಯುತ್ತಿದೆ ಎನ್ನಲಾಗಿದೆ. ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸುಳಿವು ನೀಡಿವೆ ಎನ್ನಲಾಗಿದೆ.

ಎಲ್ಲಾ ಗೆದ್ದ ಅಭ್ಯರ್ಥಿಗಳನ್ನು ಕೂಡಲೇ ಹೈದರಾಬಾರ್​ಗೆ ಬರುವ ಸೂಚನೆಯನ್ನು ಡಿಕೆ ಶಿವಕುಮಾರ್ ನೀಡಿದ್ದಾರಂತೆ. ಎಲ್ಲರನ್ನೂ ಒಟ್ಟುಗೂಡಿಸಿ ನಂತರ ನೂತನ ಶಾಸಕರನ್ನು ಅಗತ್ಯ ಬಿದ್ದರೆ ಸರ್ಕಾರ ರಚನೆವರೆಗೆ ಕರ್ನಾಟಕಕ್ಕೆ ಕರೆ ತರುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ ಎನ್ನಲಾಗಿದೆ.

https://newsnotout.com/2023/12/forest-department-and-elephant-issue-news/

Related posts

ಹಾಕತ್ತೂರು ವಿ.ಎಸ್.ಎಸ್.ಎನ್ ನ ನೂತನ ನಿರ್ದೇಶಕರಿಗೆ ಕೆ. ಜಿ.ಬೋಪಯ್ಯರಿಂದ ಸನ್ಮಾನ, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ವಶದಲ್ಲಿದ್ದ ಸಹಕಾರ ಸಂಘ ಬಿಜೆಪಿ ತೆಕ್ಕೆಗೆ!

ಜಮ್ಮು ಕಾಶ್ಮೀರದಲ್ಲಿ ನಿಗೂಢ ಕಾಯಿಲೆಗೆ 17 ಮಂದಿ ಸಾವು..! ಸಾವನ್ನಪ್ಪಿದವರ ಮನೆಗಳನ್ನು ಸಂಪೂರ್ಣವಾಗಿ ಸೀಲ್ ಮಾಡಿದ ಆರೋಗ್ಯ ಇಲಾಖೆ..!

ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ ಬಳಿಕವೂ ನಿಲ್ಲದ ಹಿಂಸಾಚಾರ..! ಹತ್ಯೆಯಾದವರ ಸಂಖ್ಯೆ 469ಕ್ಕೆ ಏರಿಕೆ..!