ಕರಾವಳಿ

ಕತ್ತು ಸೀಳಿ ಪತ್ನಿಯನ್ನು ಕೊಂದ ಪತಿ, ರಕ್ತದ ಮಡುವಿನಲ್ಲಿ ಬಿದ್ದು ಉಸಿರು ಚೆಲ್ಲಿದ ಪತ್ನಿ..!

ನ್ಯೂಸ್ ನಾಟೌಟ್ : ಕೋಪದ ಕೈಗೆ ಕತ್ತಿ ಕೊಟ್ಟರೆ ಏನೆಲ್ಲ ಅನಾಹುತ ಸಂಭವಿಸಬಹುದು ಎನ್ನುವುದಕ್ಕೆ ಇಲ್ಲೊಂದು ದಂಪತಿ ಉತ್ತಮ ಉದಾಹರಣೆಯಾಗಿ ನಿಂತಿದ್ದಾರೆ. ಶುಕ್ರವಾರ ಗಂಡ-ಹೆಂಡತಿ ನಡುವೆ ಮಾತಿನ ಸಮರ ನಡೆದಿದೆ. ಒಂದು ಹಂತದಲ್ಲಿ ಇದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಸಿಟ್ಟಿಗೆದ್ದ ಪತಿ ಪತ್ನಿಯ ಕತ್ತಿಗೆ ಚಾಕು ಹಾಕಿದ್ದಾನೆ. ಕತ್ತು ಸೀಳಿಕೊಂಡು ನೆಲಕ್ಕೆ ಬಿದ್ದ ಪತ್ನಿ ಪ್ರಾಣ ಬಿಟ್ಟಿದ್ದಾಳೆ.

ಶುಕ್ರವಾರ ಮಂಡ್ಯದ ಯಲಿಯೂರು ಗೇಟ್ ಬಳಿ ಮನುಜ (30) ವರ್ಷ ಮೃತಪಟ್ಟಿದ್ದಾರೆ. ರಾಮಚಂದ್ರ (38 ) ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಮನುಜ ಹಾಗೂ ರಾಮಚಂದ್ರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಅಂತೆಯೇ ಶುಕ್ರವಾರ ಕೂಡ ಜಗಳ ಸಂಭವಿಸಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಮಂಡ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Related posts

ಮಂಗಳೂರಿನಲ್ಲಿ ಮತ್ತೆ ಪಿಎಫ್‌ಐ ಮುಖಂಡರ ಚಳಿ ಬಿಡಿಸಿದ ಪೊಲೀಸರು

ಮತ್ತೆ ಭೂಕಂಪ..ಜೀವ ಭಯದಿಂದ ಮನೆಯಿಂದ ಹೊರಗೋಡಿದ ಜನ..!

ಗೋಳಿತ್ತೂಟ್ಟು:ಕಾರು ಮತ್ತು ಬೈಕ್ ಮಧ್ಯೆ ಅಪಘಾತ,ಬೈಕ್ ಸವಾರ ಗಂಭೀರ