ಕೊಡಗು

ಮಡಿಕೇರಿ:ಭಧ್ರಕಾಳಿ ಮಾತೆಗೆ ವಿಶೇಷ ಹರಕೆ,ಬೇಡಿಕೆ ಈಡೇರಿದರೆ ಮಗಳನ್ನು ಮಧುಮಗನಂತೆ,ಮಗನನ್ನು ಮಧುಮಗಳಂತೆ ಸಿಂಗರಿಸಬೇಕು

ನ್ಯೂಸ್ ನಾಟೌಟ್ : ವಿಶಿಷ್ಟ ಸಂಸ್ಕೃತಿ ಹಾಗೂ ವಿಭಿನ್ನ ಪರಿಸರಗಳಿಂದ ಕೊಡಗು ಜಿಲ್ಲೆ ಬಹಳ ವಿಶೇಷ ಸ್ಥಾನದಲ್ಲಿ ನಿಲ್ಲುತ್ತದೆ. ಈ ಜಿಲ್ಲೆಯಲ್ಲಿ ನಡೆಯುವ ವೈವಿಧ್ಯಮಯ ಉತ್ಸವ,ಹಬ್ಬಹರಿದಿನಗಳು ಅಲ್ಲಿನ ವೈಭವವನ್ನು ಎತ್ತಿ ತೋರಿಸುತ್ತದೆ. ಇದೀಗ ಇಲ್ಲಿ ವಿಶೇಷ ಸಂಪ್ರದಾಯದ ಬಗ್ಗೆ ಜನರಿಗೆ ಕುತೂಹಲ ಮೂಡಿದೆ.ಗಂಡನ್ನು ಮಧುಮಗಳಂತೆಯೂ, ಹೆಣ್ಣನ್ನು ಮಧು ಮಗನಂತೆಯೂ ಶೃಂಗಾರ ಮಾಡಿ ಹರಕೆ ತೀರಿಸುವ ಬಗೆಯ ವಿಶಿಷ್ಟವಾದ ಆಚರಣೆ. ಹಾಗಾದರೆ ಅದರ ವಿಶೇಷತೆಯೇನು?

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಇಬ್ಬನಿವಲವಾಡಿ ಗ್ರಾಮದ ಭದ್ರಕಾಳಿ ದೇವರ ಉತ್ಸವದಲ್ಲಿ ಈ ದೃಶ್ಯ ಕಂಡು ಬಂದಿದೆ. ಇಲ್ಲಿ ಪ್ರತಿವರ್ಷ ಮಾರ್ಚ್ ತಿಂಗಳ ನಾಲ್ಕನೇ ವಾರದಲ್ಲಿ ಭದ್ರಕಾಳಿ ಉತ್ಸವ ನೆರವೇರುತ್ತದೆ.ಈ ಸಂದರ್ಭ ಊರಿನ ಮಂದಿ ಅಲ್ಲಿ ಬಂದು ಸೇರುತ್ತಾರೆ.ಭಕ್ತರ ಬೇಡಿಕೆಯನ್ನು ಈಡೇರಿಸುವ ತಾಯಿ ಭದ್ರಕಾಳಿಯ ದರ್ಶನಕ್ಕೆ ಜನಸಾಗರವೇ ಸೇರುತ್ತದೆ. ಈ ವೇಳೆ ಹರಕೆ ಹೇಳಿದವರು ತಮ್ಮ ಬೇಡಿಕೆ ಈಡೇರಿದರೆ ತಮ್ಮ ಮಗನನ್ನು ಮಧುಮಗಳಂತಯೇ ಮಗಳನ್ನು ಮಧುಮಗನಂತೆ ಶೃಂಗರಿಸಿ ದೇವಸ್ಥಾನದ ಮೂರು ಸುತ್ತು ಒಡ್ಡೋಲಗ ಸಮೇತ ಮೆರವಣಿಗೆ ಮಾಡುವುದಾಗಿ ಬೇಡಿಕೊಂಡಿರುತ್ತಾರೆ.ಹಾಗಾಗಿ ಜಾತ್ರೆ ಸಂದರ್ಭ ಹುಡುಗ ಹಾಗೂ ಹುಡುಗಿ ಈ ವಿಶೇಷ ಹರಕೆಯನ್ನು ತೀರಿಸಲು ಮುಂದಾಗುತ್ತಾರೆ. ಇದಕ್ಕೆ ಆಂಗೋಲ ಪೋಂಗೋಲ ಎಂದು ಕರೆಯಲಾಗುತ್ತದೆ.

ಈ ಊರ ಹಬ್ಬದಲ್ಲಿ ಮೂರು ಬಗೆಯ ಸಾಂಪ್ರದಾಯಿಕ ನೃತ್ಯವಿರುತ್ತದೆ.ತಮ್ಮೂರಿನ ಭದ್ರಕಾಳಿ ದೇವರು ಕೇಳಿದ್ದನ್ನು ಅನುಗ್ರಹಿಸುವ ಮಹಾಮಾತೆ ಎಂದು ಇಲ್ಲಿನ ಭಕ್ತರು ನಂಬುತ್ತಾರೆ. ಹಾಗಾಗಿ ಈ ದಿನ ಊರಿನ ಮಂದಿಯೆಲ್ಲ ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಇಲ್ಲಿ ಬಂದು ಸೇರುತ್ತಾರೆ. ಈ ಮೂಲಕ ಕೊಡಗಿನ ವಿಶಿಷ್ಟ ಹಬ್ಬದ ಪರಂಪರೆಯೊಂದು ಇಲ್ಲಿ ಅನಾವರಣಗೊಂಡಿದ್ದು ವಿಶೇಷ..

Related posts

ಕೊಡಗು: ಅಬ್ಬಿಫಾಲ್ಸ್ ನಲ್ಲಿ ಮುರಿದು ಬಿದ್ದ ಭಾರೀ ಗಾತ್ರದ ಮರ! ಪ್ರವಾಸಿಗರು ಸ್ವಲ್ಪದರಲ್ಲೇ ಪಾರು!

ಇಸ್ಲಾಂಗೆ ಮತಾಂತರವಾಗಲು ನಕಾರ;ಗರ್ಭಿಣಿಗೆ ವಿಷಕುಡಿಸಿ ಕೊಲೆ,ದುರಂತ ಅಂತ್ಯ ಕಂಡ ಹಿಂದೂ ಯುವತಿಯ ಜೀವನ

ಮಡಿಕೇರಿ: ವೃದ್ಧರು, ಅನಾಥರು, ಅಂಧರಿಗೆ ಆಶ್ರಯ ನೀಡಿದ ವ್ಯಕ್ತಿಯೇ ಇನ್ನಿಲ್ಲ..! ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ದುರಂತ ಸಾವಿಗೀಡಾದ ವ್ಯಕ್ತಿಯ ನೆನೆದು ನಮಗ್ಯಾರು ಗತಿ ಎಂದು ಕಣ್ಣೀರಿಟ್ರು..!