ಕ್ರೈಂವೈರಲ್ ನ್ಯೂಸ್

ಹಾಸ್ಟೆಲ್ ಬಾತ್ ರೂಮಿನಲ್ಲಿ ಹಸ್ತಮೈಥುನ ನಿಷೇಧ..! ವಿದ್ಯಾರ್ಥಿಗಳಿಗೆ ಐಐಟಿ ರೂರ್ಕಿ ಹೊರಡಿಸಿದ ಸುತ್ತೋಲೆ ಹಿಂದಿನ ಸತ್ಯ ಏನು..?

ನ್ಯೂಸ್ ನಾಟೌಟ್ : ಐಐಟಿ ರೂರ್ಕಿ ವಿದ್ಯಾರ್ಥಿಗಳಿಗೆ ಎಚ್ಚರಿಸುವ ಹಸ್ತಮೈಥುನದ ನೋಟಿಸ್ ವೈರಲ್ ಆಗಿದೆ. ವಿದ್ಯಾರ್ಥಿಗಳು ಹಾಸ್ಟೆಲ್ ಬಾತ್ ರೂಮಿನಲ್ಲಿ ಹಸ್ತಮೈಥುನ ಮಾಡಿಕೊಳ್ಳಬಾರದು ಎಂದು ತಿಳಿಸಲಾಗಿದೆ.

ಹಾಗೊಮ್ಮೆ ಹಸ್ತಮೈಥುನ ಮಾಡಿಕೊಳ್ಳುವುದಿದ್ದರೆ ಅದನ್ನು ನಿಮ್ಮ ರೂಮಿನೊಳಗೆಯೇ ಮಾಡಿಕೊಳ್ಳಿ ಅನ್ನುವ ನೋಟಿಸ್ ವೈರಲ್ ಆಗುತ್ತಿದೆ. ಈ ಬೆನ್ನಲ್ಲೇ ಆಡಳಿತ ಮಂಡಳಿ ಅಂತಹ ಯಾವುದೇ ನೋಟಿಸ್ ಅನ್ನು ನಾವು ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ನಕಲಿ ಮಾಡಿಕೊಂಡು ಶೇರ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತು ರಾಜೇಂದ್ರ ಭವನ ಹಾಸ್ಟೆಲ್ ನ ವಾರ್ಡನ್ ಕಚೇರಿಯನ್ನು ಸಂಪರ್ಕಿಸಿದಾಗ ಈ ನೋಟಿಸ್ ನಕಲಿಯಾಗಿದ್ದು, ವಾರ್ಡನ್ ಆ ರೀತಿಯ ಯಾವುದೇ ಸುತ್ತೋಲೆಯನ್ನು ಹೊರಡಿಸಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಪೋಸ್ಟ್, ಫೇಕ್ ಸುದ್ದಿ ಅಭಿಯಾನದ ಭಾಗವಾಗಿದೆ. ಕೆಲವು ವರ್ಷಗಳಿಂದ ಈ ಫೇಕ್ ನೋಟಿಸ್ ಹರಿದಾಡುತ್ತಿದೆ ಎಂದು ವಾರ್ಡನ್ ಕೂಡ ಹೇಳಿದ್ದಾರೆ. ಅಲ್ಲದೇ ಈ ನಕಲಿ ಸುತ್ತೋಲೆ ಸಂಬಂಧ ಪೊಲೀಸರಿಗೆ ಐಐಟಿ ರೂರ್ಕಿ ಪೊಲೀಸರಿಗೆ ದೂರು ಕೂಡ ನೀಡಿದೆ.

ಐಐಟಿ ರೂರ್ಕಿಯ ಹಾಸ್ಟೆಲ್ ನ ‘ರಾಜೇಂದ್ರ ಭವನ’ದ ಲೆಟರ್‌ಹೆಡ್ ಹೊಂದಿರುವ ಫೇಕ್ ನೋಟೀಸ್‌ನಲ್ಲಿ, “ಶವರ್ ಗಳಲ್ಲಿ ಹಸ್ತಮೈಥುನವು ವಸತಿ ಸಂಹಿತೆಯ ಉಲ್ಲಂಘನೆಯಾಗಿದೆ.

ಶವರ್ ಡ್ರೈನ್ ಗಳನ್ನು ವೀರ್ಯವನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿಲ್ಲ! ಡ್ರೈನ್ ಗಳಲ್ಲಿ ಅತಿಯಾದ ಪ್ರಮಾಣದ ವೀರ್ಯವು ನಿರ್ವಹಣೆಗಾಗಿ ಸಾವಿರಾರು ಡಾಲರ್‌ಗಳನ್ನು ವೆಚ್ಚ ಮಾಡುತ್ತದೆ ಮತ್ತು ಇದರಿಂದಾಗಿ ಮುಂದಿನ ವರ್ಷ ಹಾಸ್ಟೆಲ್ ಶುಲ್ಕವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ದಯವಿಟ್ಟು ನಿಮ್ಮ ಸ್ವಂತ ಕೋಣೆಯಲ್ಲಿ ಹಸ್ತಮೈಥುನ ಮಾಡಿ. ಯಾವುದೇ ಪ್ರಶ್ನೆಗಳಿದ್ದರೆ ದಯವಿಟ್ಟು ನಿಮ್ಮ ವಾರ್ಡನ್ ಅನ್ನು ನೋಡಿ. ನಿಮ್ಮ ಸಹಕಾರಕ್ಕಾಗಿ ಧನ್ಯವಾದಗಳು ಎಂದು ಬರೆಯಲಾಗಿದೆ.

ಇದು ಬಹಳ ಹಿಂದಿನ ಘಟನೆಯಾಗಿದ್ದು, ಇತ್ತೀಚೆಗೆ ವೈರಲ್ ಆಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Related posts

ಉಪಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಪರಿಷತ್ ಸದಸ್ಯತ್ವಕ್ಕೆ ಸಿಪಿ ಯೋಗೀಶ್ವರ್ ರಾಜೀನಾಮೆ..! ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿಪಿವೈ ನಿರ್ಧಾರ..!

ಕೊಡಗು: ಅಬ್ಬಿಫಾಲ್ಸ್ ನಲ್ಲಿ ಮುರಿದು ಬಿದ್ದ ಭಾರೀ ಗಾತ್ರದ ಮರ! ಪ್ರವಾಸಿಗರು ಸ್ವಲ್ಪದರಲ್ಲೇ ಪಾರು!

ಪತಿಯೊಂದಿಗೆ ಜಗಳವಾಡಿ ಮನೆಯಿಂದ ತೆರಳಿದ ಪತ್ನಿ, ರೈಲಿಗೆ ತಲೆಕೊಟ್ಟು ಮೃತ್ಯು