Uncategorized

SSLC ಶೇ.94.8, PUCಯಲ್ಲಿ ಶೇ.99 ಅಂಕ ಪಡೆದ ಯುವತಿಯಿಂದ ಸನ್ಯಾಸ ದೀಕ್ಷೆ..!

ನ್ಯೂಸ್ ನಾಟೌಟ್: 20 ವರ್ಷ ವಯಸ್ಸಿನ ಯುವತಿ ವಿಧಿ ಕುಮಾರಿ ಜೈನ ಧರ್ಮದ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದಾರೆ.

ಎಸ್ಸೆಸ್ಸೆಲ್ಸಿಯಲ್ಲಿ ಶೇ 94.8, ಪಿಯುಸಿಯಲ್ಲಿ ಶೇ 99ರಷ್ಟು ಅಂಕ ಗಳಿಸಿರುವ ವಿಧಿ ಕುಮಾರಿ ಅವರು ಆಚಾರ್ಯ ಭಗವಂತ ನರರತ್ನ ಸೂರಿಶ್ವರಜೀ ಮಹಾರಾಜ ಅವರ ಸಾನ್ನಿಧ್ಯದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದಿಂದ ನಗರದಲ್ಲಿ ಜ. 17 ಹಾಗೂ 18ರಂದು ಪ್ರಥಮ ಜೈನ ದೀಕ್ಷಾ ಸಮಾರಂಭ ಆಯೋಜಿಸಲಾಗಿದೆ. ಜ. 17ರಂದು ವಿಧಿ ಕುಮಾರಿ ಶೋಭಾಯಾತ್ರೆ ನಡೆಯಲಿದೆ. ಮರುದಿನ ನರರತ್ನ ಮಹಾರಾಜರು ದೀಕ್ಷೆ ನೀಡುವರು. 

ಗದಗ ಜಿಲ್ಲೆಯಲ್ಲಿ ಚಾತುರ್ಮಾಸ ಮಾಡಿದ್ದೆ. ಅದರಲ್ಲಿ ಪಾಲ್ಗೊಂಡಿದ್ದ ವಿಧಿ ಕುಮಾರಿ ಜೈನ ಧರ್ಮದ ತತ್ವ ಸಿದ್ಧಾಂತಗಳಿಗೆ ಆಕರ್ಷಣೆಗೊಂಡು ಸನ್ಯಾಸ ದೀಕ್ಷೆ ಪಡೆಯಲು ನಿರ್ಧರಿಸಿದ್ದಾರೆ. 17ನೇ ವಯಸ್ಸಿನಲ್ಲಿದ್ದಾಗ 48 ದಿವಸ ಉಪಧ್ಯಾನ ತಪ ಕೂಡ ಅವರು ಮಾಡಿದ್ದರು. ಕಾಂತಿಲಾಲ್‌ಜೀ ಹಾಗೂ ರೇಖಾದೇವಿ ಜಿರಾವಾಲ ದಂಪತಿಯ ಮೂರನೇ ಮಗಳಾದ ವಿಧಿ ಕುಮಾರಿ ಅವರು ಸ್ವಯಂಪ್ರೇರಣೆಯಿಂದ ಧರ್ಮ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮುಂದೆ ಬಂದಿದ್ದಾರೆ’ ಎಂದು ನರರತ್ನ ಮಹಾರಾಜರು ಭಾನುವಾರ ನಗರದಲ್ಲಿ ಮಾಹಿತಿ ನೀಡಿದರು.

Related posts

ಕನ್ನಡದ ಕಗ್ಗೊಲೆಯೊಂದಿಗೆ ಸರಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಆದೇಶ ಹಿಂಪಡೆದ ಸರಕಾರ

ನಿಮ್ಮಲ್ಲಿ ಪಿಎಫ್‌ ಖಾತೆ ಇದೆಯಾ..? ಹಣ ಬೇರೆಯವರ ಪಾಲಾಗದಂತೆ ಎಚ್ಚರಿಕೆ ವಹಿಸಿ

ಕುಕ್ಕನ್ನೂರು: ಶ್ರೀ ಕಿನ್ನಿಮಾಣಿ ಪೂಮಾಣಿ ಸೇವಾ ಸಮಿತಿ ಸಾಮಾನ್ಯ ಸಭೆ, ಮುಂಬರುವ ಧಾರ್ಮಿಕ ಕಾರ್ಯಕ್ರಮಗಳ ಪೂರ್ವ ತಯಾರಿಯ ಚರ್ಚೆ