ಕೊಡಗು

ಹಾಕಿ: ಪ್ರಚಂಡ ಪ್ರದರ್ಶನ, ಕೊಡಗಿನ ಹುಡುಗಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆ

342

ನ್ಯೂಸ್ ನಾಟೌಟ್ : ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ರಾಜ್ಯ ಮಟ್ಟ ದ ಹಾಕಿ ಪಂದ್ಯಾ ವಳಿಯಲ್ಲಿ ಕೊಡಗು ಜಿಲ್ಲೆ ಪ್ರಚಂಡ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಮೈಸೂರು ಜಿಲ್ಲಾ ತಂಡವನ್ನು 2-1 ಗೋಲುಗಳಿಂದ ಕೊಡಗು ಜಿಲ್ಲಾ ತಂಡ ಪರಾಭವಗೊಳಿಸಿತು.

ಕೊಡಗು ಜಿಲ್ಲೆಯ ತಂಡವನ್ನು ಲಿಖಿತಾ ರವರು ನಾಯಕಿಯಾಗಿ ಮುನ್ನಡೆಸಿದರು ಜಿಲ್ಲೆಯಿಂದ ಪಾಲ್ಗೊಂಡ ಒಟ್ಟು 17 ಮಂದಿ ವಿದ್ಯಾರ್ಥಿನಿಯರಲ್ಲಿ ಮಡಿಕೇರಿ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾ ರ್ಥಿನಿಯರು, ಮಾದಪುರ ಚೆನ್ನ ಮ್ಮ ಪದವಿ ಪೂರ್ವ ಕಾಲೇಜಿನ ಇಬ್ಬ ರು, ಗೋಣಿಕೊಪ್ಪ ವಿದ್ಯಾ ನಿಕೇತನ ವಿದ್ಯಾ ಸಂಸ್ಥೆಯ ಒಬ್ಬ ವಿದ್ಯಾ ರ್ಥಿನಿ ವಿರಾಜಪೇಟೆ ಕಾವೇರಿ ಕಾಲೇಜಿನ ಒಬ್ಬ ವಿದ್ಯಾ ರ್ಥಿನಿ ಪಾಲ್ಗೊಂಡಿದ್ದರು. ಟೀಮ್ ಮ್ಯಾ ನೇಜರ್ ಆಗಿ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾ ಸಕರಾದ ಚಿದಾನಂದರವರು ಮುನ್ನ ಡೆಸಿದರು. ತಂಡದ ನಾಯಕಿಯಾಗಿ ಲಿಖಿತ, ಉಪನಾಯಕಿಯಾಗಿ ಸಿಂಚನಗಂಗಮ್ಮ ತಂಡದ ಜವಾಬ್ದಾರಿ ಹೊತ್ತುಕೊಂಡಿದ್ದರು. ಕೊಟ್ಟಾ ರಿ ಲಿಖಿತ, ಯುವರಾಣಿ, ಸೌಮ್ಯ , ರಕ್ಷಿತಾ, ಜಸ್ಮಿ ತ, ರಶ್ಮಿ , ಬೊಳ್ಳಮ್ಮ .,ದೇವಿಕಾ, ಅಕ್ಷತಾ, ಗಾನಶ್ರೀ , ಭೂಮಿಕಾ, ದಿಶಾ ಪೊನ್ನ ಮ್ಮ , ಅಂಜಲಿಕಾ, ಜನನಿ, ಪ್ರಣಮ್ಯ , ಶ್ರಾವ್ಯ ತಂಡವನ್ನು ಪ್ರತಿನಿಧಿಸಿದ್ದರು.

See also  ಸಂಪಾಜೆ: ಶ್ರೀ ಪಂಚಾನನ ಭಜನಾ ತಂಡದ ಸದಸ್ಯರಿಗೆ ಸನ್ಮಾನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget