ಕರಾವಳಿಕ್ರೈಂರಾಜ್ಯ

ರಾತ್ರಿ ಹಿಂದೂಗಳ ಮನೆಗೆ ನುಗ್ಗಿ ಮುಸ್ಲಿಂ ಯುವಕರ ದಾಂಧಲೆ..! ಗ್ರಾಮಸ್ಥರಿಂದ ಪೊಲೀಸ್ ಠಾಣೆ ಎದುರು ಪ್ರತಿಭಟನೆ

ನ್ಯೂಸ್ ನಾಟೌಟ್: ಹಿಂದೂಗಳ ಮನೆಗಳಿಗೆ ನುಗ್ಗಿ ಮುಸ್ಲಿಂ ಯುವಕರು ದಾಂಧಲೆ ನಡೆಸಿದ ಆರೋಪ ಮಂಡ್ಯದ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ಕೇಳಿಬಂದಿದೆ.ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾತ್ರಿಯೇ ಗ್ರಾಮಸ್ಥರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು ಬೆಳ್ಳೂರು ಪೊಲೀಸ್ ಠಾಣೆ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಬೈಕ್ ಟಚ್ ಮಾಡಿಕೊಂಡು ಓವರ್‌ಟೇಕ್‌ ಮಾಡಿದ್ದ ಇಬ್ಬರು ಮುಸ್ಲಿಂ ಯುವಕರನ್ನು ಶನಿವಾರ ಅಭಿಷೇಕ್ ಪ್ರಶ್ನೆ ಮಾಡಿದ್ದರು. ಅದೇ ದ್ವೇಷ ಮುಂದಿಟ್ಟುಕೊಂಡು ಇಂದು ಹತ್ತಾರು ಜನರ ತಂಡ ಕಟ್ಟಿಕೊಂಡು ಬಂದು ಅಭಿಷೇಕ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಬಂದಿದೆ.ಅಷ್ಟೇ ಅಲ್ಲದೇ ಕೆಲ ಹಿಂದೂಗಳ ಮನೆಗಳಿಗೆ ನುಗ್ಗಿ ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿದ್ದಾರೆ. ಈ ವೇಳೆ ಗಲಾಟೆ ನಡೆದಿದ್ದು ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಮಹಿಳೆಯರು ಸೇರಿದಂತೆ ಪೊಲೀಸ್ ಠಾಣೆ ಎದುರು ನೂರಾರು ಗ್ರಾಮಸ್ಥರ ಜಮಾವಣೆಗೊಂಡಿದ್ದಾರೆ. ಗ್ರಾಮಸ್ಥರ ಮನವಿ ಆಲಿಸಿದ ಡಿವೈಎಸ್‌ಪಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Click 👇

https://newsnotout.com/2024/05/kiccha-in-tulunadu-and-speech-kannada-news
https://newsnotout.com/2024/05/nmc-talent-hire-2k24-news-innaguaration

Related posts

ಸರ್ಕಾರಿ ಬಸ್ ಡಿಕ್ಕಿಯಾಗಿ ಪಾದಾಚಾರಿ ಸ್ಥಳದಲ್ಲೇ ಸಾವು..! ಮಂತ್ರಾಲಯಕ್ಕೆ ಹೊರಟಿದ್ದ ಬಸ್ ಚಾಲಕ ಪರಾರಿ..!

ನಮಾಜ್‌ಗೆ ಅವಕಾಶವಿಲ್ಲವೆಂದು ಎಚ್ಚರಿಕೆ ನೀಡಿದ ಕಾಲೇಜ್..! ತರಗತಿ ಆವರಣದಲ್ಲಿ ನಮಾಜ್ ಮಾಡಿದ ವಿದ್ಯಾರ್ಥಿನಿಯರು..!

ಅಮೆಜಾನ್, ಫ್ಲಿಪ್‌ಕಾರ್ಟ್ ಆನ್ ಲೈನ್ ಮಾರಾಟ ಸಂಸ್ಥೆಗಳ ವಿರುದ್ಧ ಕೇಂದ್ರದಿಂದ ಕ್ರಮ! ನೀವು ಈ ವಸ್ತುಗಳನ್ನು ಖರೀದಿಸಿದ್ದರೆ ಎಚ್ಚರ!