ದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಹಿಂದೂ ಮಹಿಳೆಗೆ ಮುಸ್ಲಿಂ ವ್ಯಕ್ತಿಯ ರಕ್ತ ನೀಡಲು ನಿರಾಕರಿಸಿದ ವೈದ್ಯ..! ಇಲ್ಲಿದೆ ವಿಡಿಯೋ

ನ್ಯೂಸ್‌ ನಾಟೌಟ್‌: ಹಿಂದೂ ಮಹಿಳೆಗೆ ರಕ್ತ ನೀಡಲು ಮುಂದಾದ ಮುಸ್ಲಿಂ ವ್ಯಕ್ತಿಗೆ ವೈದ್ಯರು ಅನುಮತಿ ನಿರಾಕರಿಸಿದ್ದಾರೆನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಧ್ಯಪ್ರದೇಶದ ಪನ್ನಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಪವನ್ ಸೋಂಕರ್ ಎಂಬಾತ ತನ್ನ ತಾಯಿಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ತೆರಳಿದ್ದಾನೆ. ಈ ವೇಳೆ ವೈದ್ಯರು ತುರ್ತಾಗಿ ರಕ್ತದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಸೋಂಕರ್ ಮುಸ್ಲಿಂ ಸಮುದಾಯಕ್ಕೆ ಸೇರಿದ ತನ್ನ ಸ್ನೇಹಿತನನ್ನು ರಕ್ತದಾನಿಯಾಗಿ ಆಸ್ಪತ್ರೆಗೆ ಕರೆತಂದಿದ್ದಾನೆ.

ಕೆಲವು ಸೆಕೆಂಡುಗಳ ವಿಡಿಯೋ ದೃಶ್ಯಗಳಲ್ಲಿ ಸೋಂಕರ್ ಮತ್ತು ವೈದ್ಯರ ನಡುವಿನ ಸಂಭಾಷಣೆ ಕಂಡು ಬಂದಿದೆ. ಆಸ್ಪತ್ರೆಯ ಉದ್ಯೋಗಿ ಮತ್ತು ರೋಗಿಯ ಸಂಬಂಧಿಕರ ನಡುವಿನ ಸಂಭಾಷಣೆಯ ವಿವರ ವೈರಲ್ ಆಗಿದೆ.
‘ಮುಸ್ಲಿಂ ವ್ಯಕ್ತಿಯ ರಕ್ತವನ್ನು ಹಿಂದೂ ರೋಗಿಗೆ ನೀಡಬಾರದು’ ಎಂದು ವೈದ್ಯ ರಕ್ತದಾನಕ್ಕೆ ಅನುಮತಿ ನಿರಾಕರಿಸಿದ ಎಂಬ ಬಗ್ಗೆ ಹಲವರಿಂದ ವಿರೋಧ ವ್ಯಕ್ತವಾಗಿದೆ.

Click

https://newsnotout.com/2024/09/govt-school-kannada-news-drunk-by-girls-inside-the-school-video-viral/
https://newsnotout.com/2024/09/darshan-thugudeepa-charge-sheet-kannada-news-highcourt-kannada-news/
https://newsnotout.com/2024/09/kananda-news-viral-news-video-cctv-fixed-on-the-doubter-head/
https://newsnotout.com/2024/09/darshan-thugudeepa-kannada-news-charge-sheet-leakage-bengaluru/
https://newsnotout.com/2024/09/iphone-16-and-pro-released-kannada-news-viral-news-technology/

Related posts

ಅಜ್ಜನ ರಿವಾಲ್ವರ್ ಹಿಡಿದು ಮನೆ ಮೇಲೆ ಮನಸೋ ಇಚ್ಛೆ ಫೈರಿಂಗ್ ಮಾಡಿದ ಮೊಮ್ಮಗ! ಎಸ್ಪಿ ಡಿಸಿಗೆ ಪತ್ರ ಬರೆದದ್ದೇಕೆ..?

ಮಮ್ಮುಟ್ಟಿ ಜತೆ ರಾಜ್‌ ಬಿ ಶೆಟ್ಟಿ ನಟಿಸಿರುವ ಟರ್ಬೊ ಟ್ರೇಲರ್‌ ಬಿಡುಗಡೆ, ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ಕರಾವಳಿ ನಟನ ಕಮಾಲ್

ಕೇರಳ: ದೇಗುಲ ಉತ್ಸವದ ವೇಳೆ ರೊಚ್ಚಿಗೆದ್ದ ಆನೆ..! ಸೊಂಡಿಲಿನಿಂದ ವ್ಯಕ್ತಿಯನ್ನು ಎಸೆದು ಆಕ್ರೋಶ, 20ಕ್ಕೂ ಹೆಚ್ಚು ಮಂದಿಗೆ ಗಾಯ, ಇಲ್ಲಿದೆ ವಿಡಿಯೋ