ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಹಿಜಾಬ್ ವಿವಾದದ ಬಳಿಕ ಈ ಶಾಲೆಗಳಲ್ಲಿ ನಿಖಾಬ್ ಕೂಡ ನಿಷೇಧ! ಈ ಮುಸ್ಲಿಂ ದೇಶ ಹೀಗೆ ಆದೇಶಿಸಿದ್ದೇಕೆ?

ನ್ಯೂಸ್ ನಾಟೌಟ್ :ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್, ನಿಖಾಬ್‌ಗೆ ಅವಕಾಶವಿಲ್ಲ. ಈ ಸಾಲಿಗೆ ಮತ್ತೊಂದು ಮುಸ್ಲಿಂ ರಾಷ್ಟ್ರ ಸೇರಿಕೊಂಡಿದೆ. ಇದೀಗ ಈಜಿಪ್ಟ್ ಸರ್ಕಾರ ಶಾಲೆಗಳಲ್ಲಿ ನಿಖಾಬ್ ನಿಷೇಧಿಸಿದೆ. ಮುಖ ಮುಚ್ಚಿಕೊಳ್ಳುವ ಬುರ್ಖಾ ರೀತಿಯ ನಿಖಾಭ್ ಶಾಲೆಗಳಲ್ಲಿ ಧರಿಸುವಂತಿಲ್ಲ ಎಂದು ಶಿಕ್ಷಣ ಸಚಿವ ರೆಡಾ ಹೆಗಾಝಿ ಆದೇಶ ಹೊರಡಿಸಿದ್ದಾರೆ.

ಕರ್ನಾಟಕದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿ ದೇಶಾದ್ಯಂತ ಹಬ್ಬಿದ ಹಿಜಾಬ್ ವಿವಾದ ತಣ್ಣಗಾಗಿದ್ದರೂ ಒಳಗಿನ ಆಕ್ರೋಶ ಕಡಿಮೆಯಾಗಿಲ್ಲ ಈಗ ಈಜಿಪ್ಟ್ ದೇಶದಲ್ಲೂ ಅಂತಹದ್ದೇ ಘಟನೆ ವರದಿಯಾಗಿದೆ.

ತಲೆಗೆ ಧರಿಸಲಾಗುವ ಸ್ಕಾರ್ಫ್ ಅಥವಾ ಹಿಜಾಬ್‌ ಜೊತೆಗೆ ಮುಖವನ್ನು ಮುಚ್ಚಲು ಬಳಸುವ ಬಟ್ಟೆಯನ್ನು ನಿಖಾಬ್‌ ಎಂದು ಕರೆಯಲಾಗುತ್ತದೆ. ಮುಖದ ಮೇಲೆ ಪರದೆಯಂತೆ ಕಂಡು ಬರುವ ಈ ಬಟ್ಟೆಯನ್ನು ಹಿಜಾಬ್‌ ಧರಿಸಿದ ಬಳಿಕ ಹಾಕಲಾಗುತ್ತದೆ. ಇದನ್ನು ಧರಿಸಿದರೆ ಕಣ್ಣು ಮಾತ್ರ ಕಾಣಿಸುತ್ತದೆ. ಹಿಜಾಬ್‌ ನಮ್ಮ ಕೂದಲು ಹಾಗೂ ಕುತ್ತಿಗೆಯನ್ನು ಮುಚ್ಚಿದರೆ, ನಿಖಾಬ್‌ ನಮ್ಮ ಕಣ್ಣನ್ನು ಬಿಟ್ಟು ಮುಖ ಪೂರ್ತಿ ಮುಚ್ಚುತ್ತದೆ.

ಈಜಿಪ್ಟ್ ಹೊರಡಿಸುವ ಹೊಸ ಆದೇಶದಲ್ಲಿ ಶಾಲೆಗಳಲ್ಲಿ ನಿಖಾಬ್ ಸಂಪೂರ್ಣ ನಿಷೇಧಿಸಲಾಗಿದೆ ಎಂದಿದೆ. ಇನ್ನು ಹಿಬಾಜ್ ಧರಿಸುವುದು ಅವರ ಇಚ್ಚೆಗೆ ಬಿಟ್ಟದ್ದು. ಯಾರೂ ಒತ್ತಾಯಪೂರ್ವಕವಾಗಿ ಹಿಜಾಬ್ ಧರಿಸುವಂತಿಲ್ಲ ಎಂದಿದೆ. ಮಕ್ಕಳು ಮುಖ ಮುಚ್ಚಿಕೊಂಡು ಶಾಲೆಗೆ ಬರುವಂತಿಲ್ಲ. ಶಾಲೆಯ ಸಮವಸ್ತ್ರದ ನಿಯಮ ಕುರಿತು ಪೋಷಕರು ಅರಿಯಬೇಕು. ಇನ್ನು ಹಿಜಾಬ್ ವಿಚಾರದಲ್ಲಿ ಪೋಷಕರು ಯಾವುದೇ ಒತ್ತಾಯ ಮಾಡುವಂತಿಲ್ಲ. ಶಾಲೆಗೆ ಹಿಜಾಬ್ ಧರಿಸುವುದರಿಂದ ಮಕ್ಕಳು ದೂರ ಉಳಿದರೆ ಒತ್ತಾಯ ಮಾಡುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಶಾಲೆಗಳಲ್ಲಿ ಹುಡುಗ ಹಾಗೂ ಹುಡುಗಿಯರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಶಾಲೆ ಸೂಚಿಸುವ ಸಮವಸ್ತ್ರವನ್ನೇ ಧರಿಸಬೇಕು. ಸೆಪ್ಟೆಂಬರ್ 30 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ ಎಂದು ಈಜಿಪ್ಟ್ ಸರ್ಕಾರದ ಶಿಕ್ಷಣ ಸಚಿವ ಹೇಳಿದ್ದಾರೆ.ಸೆಪ್ಟೆಂಬರ್ 30 ರಿಂದ ಈಜಿಪ್ಟ್‌ನಲ್ಲಿ ಅಧಿವೇಶನ ಆರಂಭಗೊಳ್ಳಲಿದೆ. ಈ ದಿನದಿಂದಲೇ ಸಮವಸ್ತ್ರ ನಿಯಮ ಜಾರಿಗೆ ಬರಲಿದೆ ಎಂದಿದೆ.

ಹಜಾಬ್ ಧರಿಸುವುದಾದರೆ ಶಿಕ್ಷಣ ಇಲಾಖೆ ಸೂಚಿಸಿದ ಬಣ್ಣದಲ್ಲೇ ಇರಬೇಕು. ಈಜಿಪ್ಟ್ ಶಿಕ್ಷಣ ಇಲಾಖೆ ನಿರ್ಧಾರವನ್ನು ಬಹುತೇಕರು ಸ್ವಾಗತಿಸಿದ್ದಾರೆ. ಇದರ ನಡುವೆ ಕೆಲ ಮೂಲಭೂತವಾದಿ ಗುಂಪುಗಳು ವಿರೋಧ ವ್ಯಕ್ತಪಡಿಸಿದೆ. ಇದು ಇಸ್ಲಾಂ ವಿರುದ್ಧ ತೆಗೆದುಕೊಂಡ ನಿರ್ಧಾರ ಎಂದು ಆರೋಪಿಸಿದೆ.

ಈಜಿಪ್ಟ್ ಸರ್ಕಾರ ಕಚೇರಿ, ಖಾಸಗಿ ಕಚೇರಿಗಳಲ್ಲಿ ಹಿಜಾಬ್, ಬುರ್ಖಾ, ನಿಖಾಬ್ ಧರಿಸುವಂತಿಲ್ಲ. ವಿಶ್ವವಿದ್ಯಾಲಯಗಳಲ್ಲಿನ ಸಿಬ್ಬಂದಿಗಳು ಹಿಜಾಬ್, ನಿಖಾಬ್, ಬುರ್ಖಾ ಧರಿಸುವಂತಿಲ್ಲ. 2015ರಲ್ಲೇ ಈಜಿಪ್ಟ್ ಸರ್ಕಾರ ಈ ನಿರ್ಧಾರ ಘೋಷಿಸಿತ್ತು. ಇದರ ವಿರುದ್ಧ ಹಲವು ಮೂಲಭೂತ ಸಂಘಟನೆಗಳು ಕೋರ್ಟ್ ಮೆಟ್ಟೆಲೇರಿತ್ತು. 2020ರಲ್ಲಿ ಸರ್ಕಾರದ ಆದೇಶವನ್ನು ನ್ಯಾಯಾಲಯ ಸರ್ಕಾರದ ಆದೇಶವನ್ನು ಸರಿ ಎಂದಿದೆ.

Related posts

ತಂದೆಯದ್ದೇ ಕಾರು ಹರಿದು ಪುಟ್ಟ ಕಂದನ ದುರಂತ ಅಂತ್ಯ..! ಆ ರಾತ್ರಿ ನಡೆದದ್ದೇನು..?

ರಾಮಮಂದಿರ ಉದ್ಘಾಟನೆಗೆ ಸೋನಿಯ ಸೇರಿ ಹಲವು ಕಾಂಗ್ರೆಸ್ ಮುಖಂಡರಿಗೆ ಆಹ್ವಾನ ನೀಡಿದ್ಯಾರು? ಮುಖಂಡರ ಪ್ರತಿಕ್ರಿಯೆ ಹೇಗಿತ್ತು..?

ಉಡುಪಿ ಪೇಟೆಯಲ್ಲಿ ಕಾರಿನೊಳಗೆ ಅನೈತಿಕ ಚಟುವಟಿಕೆ..! ಇಣುಕಿ ನೋಡಿದ ಸಾರ್ವಜನಿಕರು, ಕಾರು ಬಿಟ್ಟು ಜೋಡಿ ಪರಾರಿ..!