ಕ್ರೈಂವೈರಲ್ ನ್ಯೂಸ್

ಇಷ್ಟಪಟ್ಟವರನ್ನು ಮದುವೆಯಾಗಿ ಎಂದ ಹೈಕೋರ್ಟ್, ದಂಪತಿಗೆ ಪೊಲೀಸ್ ಭದ್ರತೆ ನೀಡಿದ ಕೋರ್ಟ್ ಪೋಷಕರಿಗೆ ಹೇಳಿದ್ದೇನು? ಏನಿದು ಪ್ರಕರಣ?

ನ್ಯೂಸ್ ನಾಟೌಟ್: ಪ್ರತಿಯೊಬ್ಬ ವ್ಯಕ್ತಿಗೂ ತಾನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯನ್ನು ಮದುವೆಯಾಗುವ ಹಕ್ಕಿದೆ. ಇದನ್ನು ಕುಟುಂಬದವರು ಆಕ್ಷೇಪಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ವಿವಾಹದ ನಂತರ ಕುಟುಂಬದಿಂದ ಬೆದರಿಕೆಯನ್ನು ಎದುರಿಸುತ್ತಿರುವ ದಂಪತಿಗೆ ಪೊಲೀಸ್ ರಕ್ಷಣೆಯನ್ನು ನೀಡಿದ ದೆಹಲಿ ಹೈಕೋರ್ಟ್, ಒಬ್ಬರು ಸ್ವಂತ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಅಳಿಸಲಾಗದು. ಇದು ಸಾಂವಿಧಾನಿಕವಾಗಿ ರಕ್ಷಿಸಲ್ಪಟ್ಟಿದೆ ಮತ್ತು ಕುಟುಂಬದ ಸದಸ್ಯರೂ ಇದನ್ನು ವಿರೋಧಿಸುವಂತಿಲ್ಲ ಎಂದು ಹೇಳಿದೆ.

ಇತ್ತೀಚಿನ ಆದೇಶದಲ್ಲಿ, ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ, ರಾಜ್ಯವು ತನ್ನ ನಾಗರಿಕರಿಗೆ ರಕ್ಷಣೆ ನೀಡುವ ಸಾಂವಿಧಾನಿಕ ಬಾಧ್ಯತೆಯ ಅಡಿಯಲ್ಲಿದೆ.ಸಾಂವಿಧಾನಿಕ ನ್ಯಾಯಾಲಯವಾಗಿರುವುದರಿಂದ ದಂಪತಿಗಳ (Couple) ಸಾಂವಿಧಾನಿಕ ಹಕ್ಕುಗಳನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಒತ್ತಿ ಹೇಳಿದರು. ‘ಅರ್ಜಿದಾರರ ಸ್ವಂತ ಆಯ್ಕೆಯ ವ್ಯಕ್ತಿಯನ್ನು ಮದುವೆ (Marriage)ಯಾಗುವ ಹಕ್ಕು ಅಳಿಸಲಾಗದ ಮತ್ತು ಸಂವಿಧಾನದ ಅಡಿಯಲ್ಲಿ ರಕ್ಷಿಸಲ್ಪಟ್ಟಿದೆ, ಅದನ್ನು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸಲಾಗುವುದಿಲ್ಲ’ ಎಂದು ನ್ಯಾಯಾಲಯ (Court) ಸ್ಪಷ್ಟಪಡಿಸಿದೆ.

‘ಅರ್ಜಿದಾರರು ಆಯ್ಕೆ ಮಾಡಿದ ವ್ಯಕ್ತಿಯನ್ನು ಮದುವೆಯಾಗುವ ಸ್ವಾತಂತ್ರ್ಯ ಹೊಂದಿರುತ್ತಾರೆ. ವೈವಾಹಿಕ ಸಂಬಂಧಗಳಿಗೆ ಯಾರೂ, ಕುಟುಂಬದ ಸದಸ್ಯರು ಕೂಡ ಆಕ್ಷೇಪಿಸುವಂತಿಲ್ಲ’ ಎಂದು ಪೊಲೀಸ್ ರಕ್ಷಣೆಗಾಗಿ ದಂಪತಿಗಳು ಸಲ್ಲಿಸಿದ ಅರ್ಜಿಯನ್ನು ವ್ಯವಹರಿಸುವಾಗ ನ್ಯಾಯಾಲಯವು ಅಬಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ತಂದೆ-ತಾಯಿಯ ಅಪೇಕ್ಷೆಗೆ ವಿರುದ್ಧವಾಗಿ ಜೋಡಿ ಏಪ್ರಿಲ್‌ನಲ್ಲಿ ವಿವಾಹವಾಗಿದ್ದರು. ಕುಟುಂಬ ಸದಸ್ಯರು, ವಿಶೇಷವಾಗಿ ಹೆಣ್ಣಿನ ತಾಯಿಯ ಬೆದರಿಕೆಯನ್ನು ಒಡ್ಡುತ್ತಿದ್ದರು. ಇದು ತಪ್ಪು ಎಂದು ಕೋರ್ಟ್ ತಿಳಿಸಿದೆ.

ನ್ಯಾಯಾಲಯವು ಅರ್ಜಿದಾರರಿಬ್ಬರಿಗೂ ರಕ್ಷಣೆ ನೀಡುವಂತೆ ಮತ್ತು ಅವರಿಬ್ಬರಿಗೂ, ನಿರ್ದಿಷ್ಟವಾಗಿ, ಪೋಷಕರಿಂದ ಅಥವಾ ಕುಟುಂಬದ ಸದಸ್ಯರಿಂದ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು, ರಾಜ್ಯಕ್ಕೆ ನಿರ್ದೇಶಿಸಿತು. ನಿಯಮಿತವಾಗಿ ಇದನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿದೆ ಎನ್ನಲಾಗಿದೆ.

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut

Website : https://newsnotout.com/

Related posts

ಮಹಿಳಾ ಪೊಲೀಸ್‌ ಪೇದೆ ಜೊತೆ ಲಾಡ್ಜ್‌ ನಲ್ಲಿ ಸಿಕ್ಕಿಬಿದ್ದ ಡಿ.ಎಸ್.ಪಿ..! ಹುಡುಕಿಕೊಂಡು ಬಂದ ಹೆಂಡತಿ ಮಾಡಿದ್ದೇನು..?

ಇಶಾ ಫೌಂಡೇಶನ್ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್..! ಯುವತಿಯರ ತಲೆಕೆಡಿಸಿ ಆಶ್ರಮಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದ ಯುವತಿಯರ ತಂದೆ..!

500 ರೂಪಾಯಿ ಚಲನ್‌  ತಪ್ಪಿಸಲು ಪ್ರೀತಿಸಿದ ಹುಡುಗಿನ್ನೇ ನೆಲಕ್ಕುರುಳಿಸಿ ಹೋದ ಯುವಕ..! ಮುಂದೇನಾಯ್ತು..? ಇಲ್ಲಿದೆ ವಿಡಿಯೋ ವೈರಲ್!