ದೇಶ-ಪ್ರಪಂಚ

Helicopter Missing:6 ಪ್ರಯಾಣಿಕರನ್ನು ಹೊತ್ತೊಯ್ದಿದ್ದ ಹೆಲಿಕಾಪ್ಟರ್ ನಿಗೂಢ ನಾಪತ್ತೆ,

ನ್ಯೂಸ್ ನಾಟೌಟ್ : ನೇಪಾಳದಲ್ಲಿ 6 ಜನರನ್ನು ಹೊತ್ತೊಯ್ದಿದ್ದ ಹೆಲಿಕಾಪ್ಟರ್ ನಿಗೂಢ ನಾಪತ್ತೆಯಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.ಇದರಿಂದ ಆತಂಕ ತೀವ್ರಗೊಂಡಿದೆ. ಇಂದು ಬೆಳಗ್ಗೆ 10.15ರ ಸುಮಾರಿಗೆ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿದೆ ಎಂದು ವರದಿ ತಿಳಿಸಿದೆ.ಸೋಲುಖುಂಬು ಮತ್ತು ಕಾಠ್ಮಂಡು ನಡುವೆ ಈ ಘಟನೆ ನಡೆದಿದೆ ಎಂದು ಅಧಿಕಾರಿ ಜ್ಞಾನೇಂದ್ರ ಭುಲ್ ಹೇಳಿದ್ದಾರೆ.

ಸೋಲುಖುಂಬುವಿನಲ್ಲಿ ಸುರ್ಕಿಯಿಂದ ಹೊರಟ ಮನಂಗ್ ಏರ್ ಹೆಲಿಕಾಪ್ಟರ್ 15 ನಿಮಿಷಗಳ ನಂತರ ಸಂಪರ್ಕವಿಲ್ಲದೆ ಹೋಯಿತು ಎಂದು ಕಾಠ್ಮಂಡು ಪೋಸ್ಟ್ ವರದಿ ಮಾಡಿದೆ.9NMV ಕರೆ ಚಿಹ್ನೆಯೊಂದಿಗೆ ಹೆಲಿಕಾಪ್ಟರ್ ಬೆಳಗ್ಗೆ 10:12ಕ್ಕೆ (ಸ್ಥಳೀಯ ಸಮಯ) ಹೊರಬಂದಿತ್ತು. ನಾಪತ್ತೆಯಾದ ಹೆಲಿಕಾಪ್ಟರ್‌ನಲ್ಲಿ 5 ವಿದೇಶಿ ಪ್ರಜೆಗಳಿದ್ದರು ಹಾಗೂ ಓರ್ವ ಪೈಲೆಟ್ ಇದ್ದ. ನಾಪತ್ತೆ ಸಂಬಂಧ, ತನಿಖೆ ಶುರುವಾಗಿದೆ. ಕಾಪ್ಟರ್ ಯಾವುದಾದರೂ ದುರಂತಕ್ಕೆ ಸಿಲುಕಿದ್ಯಾ ಅಂತಾ ಶೋಧಕಾರ್ಯ ನಡೆಯುತ್ತಿದೆ.

Related posts

ಎಣ್ಣೆ ಪ್ರಿಯರಿಗೆ ಶಾಕಿಂಗ್ ನ್ಯೂಸ್‌ ನೀಡಿದ ಸಿದ್ದು ಬಜೆಟ್‌..!ಮದ್ಯ ಬೆಲೆಯಲ್ಲಿ ಮತ್ತೆ ಏರಿಕೆ..!

ಬ್ರೈನ್​​ ಡೆಡ್ ಆದ ವ್ಯಕ್ತಿಗೆ ಹಂದಿಯ ಕಿಡ್ನಿ ಕಸಿ ಮಾಡಿದ ವೈದ್ಯರು..!ಹೊಸ ಸಂಶೋಧನೆ ಮಾಡಿದ ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

“ಲಿವ್ ಇನ್ ರಿಲೇಶನ್” ಗೆ ಇನ್ನು ಮುಂದೆ ನೋಂದಣಿ ಕಡ್ಡಾಯ..!ಮುಸ್ಲಿಮರು ಸೇರಿದಂತೆ ಯಾವ ಧರ್ಮದವರಿಗೂ 2ನೇ ಮದುವೆ ಅವಕಾಶವಿಲ್ಲ