ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಹೆಲಿಕಾಪ್ಟರ್‌ ಮೂಲಕ ಹೆಲಿಕಾಪ್ಟರನ್ನೇ ಏರ್‌ ಲಿಫ್ಟ್‌ ಮಾಡಿದ ಸೇನೆ..! ಕೇದಾರನಾಥದಲ್ಲಿ ದಿಢೀರ್ ಪತನ ..! ಇಲ್ಲಿದೆ ವಿಡಿಯೋ

ನ್ಯೂಸ್‌ ನಾಟೌಟ್‌: ಹಾನಿಯಾದ ಹೆಲಿಕಾಪ್ಟರ್‌ ದುರಸ್ತಿಗಾಗಿ ಎತ್ತಿಕೊಂಡು ಸಾಗುತ್ತಿದ್ದಾಗ ಖಾಸಗಿ ಹೆಲಿಕಾಪ್ಟರ್‌ (Private Helicopter) ಪತನಗೊಂಡ ಘಟನೆ ಉತ್ತರಾಖಂಡದ ಕೇದಾರನಾಥದಲ್ಲಿ ನಡೆದಿದೆ.

ಈ ಹಿಂದೆ ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಹಾನಿಗೊಳಗಾದ ಹೆಲಿಕಾಪ್ಟರ್ ಅನ್ನು ವಾಯುಸೇನೆಯ MI-17 ಹೆಲಿಕಾಪ್ಟರ್‌ ಎತ್ತಿಕೊಂಡು ಸಾಗುತ್ತಿತ್ತು. ಈ ವೇಳೆ ಹೆಲಿಕಾಪ್ಟರ್‌ ಜಾರಿ ಬಿದ್ದು ಮಂದಾಕಿನಿ ನದಿಯ (Mandakini River) ಬಳಿ ಪತನಗೊಂಡಿದೆ.

ಅಪಘಾತದಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬುದು ತಕ್ಷಣ ತಿಳಿದು ಬಂದಿಲ್ಲ. ಹೆಲಿಕಾಪ್ಟರ್‌ ಪತನಗೊಳ್ಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಭಾರೀ ಮಳೆಯಿಂದಾಗಿ ಖಾಸಗಿ ಕಂಪನಿ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್‌ ಹಾಳಾಗಿತ್ತು. ಈ ಹೆಲಿಕಾಪ್ಟರ್‌ ಅನ್ನು ದುರಸ್ತಿಗಾಗಿ ವಾಯುಸೇನೆಯ ಹೆಲಿಕಾಪ್ಟರ್‌ ಮೂಲಕ ಏರ್‌ ಲಿಫ್ಟ್‌ ಮಾಡಿ ತೆಗೆದುಕೊಂಡು ಹೋಗಲಾಗುತ್ತಿತ್ತು.
ಆಗಸ್ಟ್‌ನಲ್ಲಿ ಚಾರಣ ಮಾರ್ಗವನ್ನು ಹೆಚ್ಚಾಗಿ ಸ್ಥಗಿತಗೊಳಿಸಲಾಗಿದ್ದರೂ, ಯಾತ್ರಾರ್ಥಿಗಳು ಹೆಲಿಕಾಪ್ಟರ್‌ಗಳಲ್ಲಿ ಹಿಮಾಲಯ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ, ಈ ಕಾರಣಕ್ಕೆ ಬಳಸಲಾಗುತ್ತಿತ್ತು.

Click

https://newsnotout.com/2024/08/pavitra-gowda-jail-kannada-news-darshan-thugudeepa-dogs-shift/
https://newsnotout.com/2024/08/real-estate-business-conflict-kannada-news-fire-viral/
https://newsnotout.com/2024/08/kodagu-private-bus-drivers-conflict-kannada-news-gonikoppa/

Related posts

ಭಾರತ ಮಾತೆಯ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ವಿಕೃತಿ..! ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಟ್ಟ ವ್ಯಕ್ತಿಯ ಬಂಧನ

ಇನ್ನು ಮುಂದೆ ಪಾನ್ ಕಾರ್ಡ್ ನಲ್ಲೂ ಇರಲಿದೆ QR ಕೋಡ್..! ಏನಿದು ಪಾನ್ ಕಾರ್ಡ್ 2.0 ಯೋಜನೆ..?

ಮೋದಿ ಬೆದರಿಕೆಗಳಿಗೆ ಬಗ್ಗಲ್ಲ ಎಂದ ಮಾಲ್ದೀವ್ಸ್ ಅಧ್ಯಕ್ಷ..! ಚೀನಾದ ಪ್ರವಾಸಿಗರು ಮಾಲ್ದೀವ್ಸ್ ಗೆ ಬರುವಂತೆ ಮನವಿ