ಕ್ರೀಡೆ/ಸಿನಿಮಾ

ನಟಿ ಸುಶ್ಮಿತಾ ಸೇನ್ ಗೆ ಹೃದಯಾಘಾತ

ನ್ಯೂಸ್ ನಾಟೌಟ್ :ಖ್ಯಾತ ನಟಿ, ಮಾಜಿ ವಿಶ್ವ ಸುಂದರಿ  ಸುಶ್ಮಿತಾ ಸೇನ್​ ಅವರಿಗೆ ಹೃದಯಾಘಾತ ಆಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕೆಲವೇ ದಿನಗಳ ಹಿಂದೆ ನಡೆದ ಈ ಘಟನೆ ಈಗ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.

 ಸದ್ಯ ಅವರು ಈಗ ಆರೋಗ್ಯವಾಗಿದ್ದಾರೆಂದು ತಿಳಿದು ಬಂದಿದೆ. ಹೃದಯಾಘಾತ ಆದ ಕೂಡಲೇ ಅವರಿಗೆ ವೈದ್ಯಕೀಯ ನೆರವು ಸಿಕ್ಕಿತು. ವೈದ್ಯರ ಸಲಹೆ ಮೇರೆಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಮತ್ತು ಸ್ಟೆಂಟ್ಸ್​ ಅಳವಡಿಸಲಾಗಿದೆ. ಈಗ ತಮ್ಮ ಆರೋಗ್ಯ ಸ್ಥಿರವಾಗಿದೆ ಎಂದು ಸುಶ್ಮಿತಾ ಸೇನ್​ ಅವರು ಹೆಲ್ತ್​ ಅಪ್​ಡೇಟ್​ ನೀಡಿದ್ದಾರೆ.ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಸುಶ್ಮಿತಾ ಸೇನ್​ ಅವರ ಸೋಶಿಯಲ್​ ಮೀಡಿಯಾ ಪೋಸ್ಟ್​ಗೆ ನೆಟ್ಟಿಗರು ಕಮೆಂಟ್​ ಮಾಡುವ ಮೂಲಕ ಕಾಳಜಿ ವ್ಯಕ್ತಪಡಿಸಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಫ್ಯಾನ್ಸ್​ ಸಲಹೆ ನೀಡಿದ್ದಾರೆ.

Related posts

ಸುಳ್ಯ: ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್‌ಗೆ ಚಾಲನೆ

‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಉತ್ತರಪ್ರದೇಶದಲ್ಲಿ ತೆರಿಗೆ ಇಲ್ಲ! ಪಶ್ಚಿಮಬಂಗಾಳದಲ್ಲಿ ಯಾಕೆ ನಿಷೇಧ..?

ಯೋಗೇಶ್ ಕಥುನಿಯಾ-ದೇವೇಂದ್ರ ಜಜಾರಿಯಾಗೆ ಬೆಳ್ಳಿ, ಸುಂದರ್ ಸಿಂಗ್ ಗುರ್ಜಾರ್ ಗೆ ಕಂಚು